ಖ್ಯಾತ ವಿಮರ್ಶಕ, 'ಗಾಂಧಿ ಕಥನ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿದ್ದ ಸಾಹಿತಿ ಡಿಎಸ್ ನಾಗಭೂಷಣ ಅವರು ನಿಧನರಾಗಿದ್ದಾರೆ.
ನೇರ ನಡೆ ನುಡಿಯ ಲೇಖಕರಾಗಿದ್ದ 70 ವರ್ಷದ ಡಿಎಸ್ ನಾಗಭೂಷಣ ಅವರು ಅನಾರೋಗ್ಯ ಕಾರಣ ಬುಧವಾರ ತಡರಾತ್ರಿ ನಿಧನರಾಗಿದ್ದು, ಇಂದು ಸಂಜೆ 4 ಗಂಟೆಗೆ ಶಿವಮೊಗ್ಗದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಕಲ್ಲಹಳ್ಳಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹತ್ತು
ವರ್ಷ 'ಹೊಸ ಮನುಷ್ಯ' ಪತ್ರಿಕೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದ ನಾಗಭೂಷಣ ಅವರು, ರೂಪರೂಪಗಳನು ದಾಟಿ, ವಿಧವಿಧ, ಇಂದಿಗೆ ಬೇಕಾದ ಗಾಂಧಿ ಕೃತಿಗಳನ್ನು ರಚನೆ ಮಾಡಿದ್ದಾರೆ. ಶ್ರೀಮತಿ ಸವಿತಾ ನಾಗಭೂಷಣ ಸಹ ಕನ್ನಡದ ಖ್ಯಾತ ಲೇಖಕಿ ಮತ್ತು ಕವಿಯೂ ಹೌದು.














