Coastal Bulletin

ಬಂಟ್ವಾಳ: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕುಖ್ಯಾತ ಚೋರರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾ.ನ ನರಿಕೊಂಬು ಗ್ರಾಮದ ನೆಹರುನಗರ ನಿವಾಸಿ ಅಕ್ಬರ್( 32), ಬೆಳ್ತಂಗಡಿ ತಾ.ನ ಕುವೆಟ್ಟು ಗ್ರಾಮದ ಸಬರಬೈಲ್ ನಿವಾಸಿ ಸಿದ್ದೀಕ್ ಯಾನೆ ಅಬುಬಕ್ಕರ್ ಸಿದ್ದೀಕ್ ( 27) , ಪುಂಜಾಲಕಟ್ಟೆ ಉರ್ಕಿದಬೈಲ್ ನಿವಾಸಿ ಸಮೀರ್ (23) ಬಂಧಿತ ಆರೋಪಿಗಳು.

ಎ.23 ರಂದು ಬಿ.ಸಿ.ರೋಡಿನ ರೈಲ್ವೇ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ರೈಲ್ವೇ ಸಿಬ್ಬಂದಿ ಅನೂಫ್ ಹಾಗೂ ಎ.27 ರಂದು ಬಂಟ್ವಾಳ ಸಮೀಪದ ಮಣಿಹಳ್ಳದಲ್ಲಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಮುಖೇಶ್ ಅವರಿಗೆ ಸೇರಿದ

ಬೈಕನ್ನು ಆರೋಪಿಗಳು‌ ಕಳವುಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳಿಂದ ಕಳವುಗೈದ ಎರಡು ಬೈಕ್ ಹಾಗೂ ಕೃತ್ಯಕ್ಕೆ ಬಳಸಲಾದ ಕಾರನ್ನು ಪೊಲೀಸರು ವಶಪಡಿಸಿದ್ದಾರೆ.

ಆರೋಪಿಗಳ ನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು ಪೋಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಬಂಟ್ವಾಳ ನಗರ ಠಾಣಾ ಇನ್ಸ್ ಪೆಕ್ಟರ್ ವಿವೇಕಾನಂದ ಅವರ ನೇತೃತ್ವದಲ್ಲಿ ನಡೆದ ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಎಸ್. ಐ.ಗಳಾದ ಅವಿನಾಶ್,ಕಲೈಮಾರ್ ಸಿಬ್ಬಂದಿಗಳಾದ ಇರ್ಶಾದ್, ಗಣೇಶ್ ನೆಟ್ಲ, ಮನೋಹರ್, ಪ್ರವೀಣ್, ಮೋಹನ್, ನಾಗರಾಜ್ , ವನಿತಾ, ನಾರಾಯಣ ಭಾಗವಹಿಸಿದ್ದರು.


 

Leave a Comment