Coastal Bulletin

ಮಂಗಳೂರು: ಪಶ್ಚಿಮ ವಾಹಿನಿ ನದಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅದಕ್ಕಾಗಿ ರಾಜ್ಯದ ಬಜೆಟ್ ನಲ್ಲಿಯೇ 500 ಕೋಟಿ ರೂ. ಇರಿಸಲಾಗಿದೆ ಎಂದು ಸಣ್ಣನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿ ಹೇಳಿದರು.

ಈ ಬಗ್ಗೆ ಪ್ರಗತಿ ಶಾಸಕರು, ಸಚಿವರ ನೇತೃತ್ವದಲ್ಲಿ ನಡೆಸ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಮೂಲಕ ನೀರು ನಿಲ್ಲಿಸಿ ನೀರಾವರಿ ಮಾಡಲಾಗುತ್ತದೆ. ಅದೇ ರೀತಿ ಈ ಮೂಲಕ ಕುಡಿಯುವ ನೀರಿಗೂ ಬಳಸಲಾಗುತ್ತದೆ‌. ಜೊತೆಗೆ ಅಂತರ್ಜಲ ಹೆಚ್ಚಲ ಮಾಡಲು ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು. 

ಜೊತೆಗೆ ಅಲ್ಲಿ ಎರಡು ಬೆಟ್ಟಗಳ ಮಧ್ಯೆ ತಳುಕು ಹಾಕುತ್ತಿರುವುದರಿಂದ ಸ್ಥಳೀಯರಿಗೆ ಓಡಾಟ ನಡೆಸಲು 3-4 ಕಿ.ಮೀ. ಬಳಸಿಕೊಂಡು ಸಂಚಾರ ನಡೆಸಬೇಕಿತ್ತು‌. ಇದೀಗ ಈ ಕಾಮಗಾರಿ ಮೂಲಕ ಓಡಾಟಕ್ಕೆ ಸುಲಭ ಮಾಡಲು ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಅಡ್ಯಾರ್ ನಲ್ಲಿ‌170 ಕೋಟಿ ರೂ. ನಲ್ಲಿ ಪ್ರಾಜೆಕ್ಟ್ ಆರಂಭಿಸಲಾಗಿದೆ. ಅದೇ ರೀತಿ

ಉಳಿದ ಕ್ಷೇತ್ರದಲ್ಲಿ 47 ಕೋಟಿ ರೂ. ನಲ್ಲಿ‌ ಕಾಮಗಾರಿ ಆರಂಭಿಸಲಾಗುತ್ತದೆ. ಇಡೀ ಈ ಬಗ್ಗೆ ಇಂದು ಶಾಸಕರಲ್ಲಿ ಚರ್ಚೆ ಮಾಡಲಾಗಿದೆ. ಮುಂದೆ ಯಾವ ರೀತಿ ಈ ಹಣವನ್ನು ವಿನಿಯೋಸಲಾಗುತ್ತದೆ ಎಂದು ನಿರ್ಧರಿಸಲಾಗುತ್ತದೆ ಎಂದು ಹೇಳಿದರು.

ಕೇಂದ್ರದ 15 ನೇ ಹಣಕಾಸು ಯೋಜನೆಯನ್ನು ರಾಜ್ಯಕ್ಕೆ, ಜಿಪಂಗೆ, ಗ್ರಾಪಂಗಳಿಗೆ ಎಂದು ಮೂರು ಭಾಗ ಮಾಡಲಾಗಿದ್ದು, ಇದನ್ನು ಈಗಾಗಲೇ ಹಂಚಲಾಗಿದೆ. ಆಯಾ ಮಟ್ಟದಲ್ಲಿ ಈ ಕಾರ್ಯ ನಡೆಸಲಾಗುತ್ತಿದೆ. ನಾಲ್ಕು ಹಂತಗಳಲ್ಲಿ ನೇರವಾಗಿ ಹಂಚಲಾಗುತ್ತಿದೆ. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ, ಕಂದಾಯ ನಷ್ಟದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಸಂಗ್ರಹ ಆಗದಿದ್ದರೂ ಎಲ್ಲರಿಗೂ ಈಗಾಗಲೇ ಹಣಕಾಸು ಹ‌ಂಚಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

Leave a Comment