Coastal Bulletin

ದೆಹಲಿ: ರಷ್ಯಾ - ಉಕ್ರೇನ್ ಯುದ್ಧ ನಡೆಯುತ್ತಿದ್ದಂತೆ ಆ ಎರಡು ದೇಶಗಳ ಬಗ್ಗೆ ತಿಳಿಯಲು ಎಲ್ಲರೂ ಉತ್ಸುಕರಾಗಿದ್ದಾರೆ.

ಉಕ್ರೇನ್ ನಲ್ಲಿ ಭಾರತೀಯರು 24% ಗಳಷ್ಟು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.ಪಂಜಾಬ್,ಹರಿಯಾಣ ರಾಜ್ಯಗಳಿಂದ ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಭಾರತಕ್ಕಿಂತ ಉಕ್ರೇನ್ ನಲ್ಲಿ ವಿದ್ಯಾಭ್ಯಾಸ ತುಂಬಾ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಗುಣಮಟ್ಟದ ಶಿಕ್ಷಣ ಲಭಿಸುತ್ತದೆ ಎಂದು ಅಲ್ಲಿ ವಿದ್ಯಾಭ್ಯಾಸ ಪಡೆಯುವವರ ವಾದ. MBBS ಶಿಕ್ಷಣ ಭಾರತದಲ್ಲಿ 1 ಕೋಟಿಗಳಷ್ಟು ಖರ್ಚು ಮಾಡಬೇಕಾದರೆ ಅದೇ ಉಕ್ರೇನ್ ನಲ್ಲಿ ಸುಮಾರು  25000ಗಳಷ್ಟು ಸಾಕಾಗುತ್ತೆ ಎಂಬುದು ಪರಿಣಿತರ ವಾದ.

ಅತೀ ಕಡಿಮೆ ವೆಚ್ಚದ ಶಿಕ್ಷಣದ

ಜೊತೆಗೆ ಗುಣಮಟ್ಟದ ವೈದ್ಯಕೀಯ ಶಿಕ್ಷಣ,ಜಾಗತಿವಾಗಿ ಮನ್ನಣೆ,  ಉತ್ತಮ ಲ್ಯಾಬ್ ಗಳು ಉಕ್ರೇನ್ ದೇಶದಲ್ಲಿದೆ.

ಅಲ್ಲಿಯೇ ಶಿಕ್ಷಣ ಪಡೆದರೆ ಯುರೋಪ್ ದೇಶಗಳಲ್ಲಿ ಭಾರತೀಯ ಮೂಲದವರಿಗೆ ಬೇಗನೇ ಕೆಲಸ ಕೂಡ ಸಿಗತ್ತದೆ. ಭಾರತದಲ್ಲಿ NEET ಪರೀಕ್ಷೆ ಪಾಸ್ ಆಗಿದ್ದಲ್ಲಿ  ವೈದ್ಯಕೀಯ ಸೀಟ್ ಸಿಗುವಲ್ಲಿ ದೊಡ್ಡ ಕಷ್ಟವೂ ಇಲ್ಲ.

ಭಾರತೀಯ ವಿದ್ಯಾಭ್ಯಾಸ ರಂಗದಲ್ಲಿ ಶಿಕ್ಷಣ ವೆಚ್ಚವು ಅತ್ಯಂತ ದುಬಾರಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ಇನ್ನಾದರೂ ಸರಕಾರಗಳು ಇದರ ಬಗ್ಗೆ ಗಮನ ಹರಿಸಲಿ ಎಂಬುದು ದೇಶದ ನಾಗರಿಕರ ಆಗ್ರಹ.

Leave a Comment