ಬೆಂಗಳೂರು : ಯುವತಿಯನ್ನು ಕೊಂದು ಬರೊಬ್ಬರಿ 59 ಪೀಸ್‌‌‌ ಮಾಡಿ ಫ್ರಿಡ್ಜ್‌ನಲ್ಲಿಟ್ಟು ಎಸ್ಕೇಪ್ ಆಗಿದ್ದ ಆರೋಪಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

Coastal Bulletin
ಬೆಂಗಳೂರು : ಯುವತಿಯನ್ನು ಕೊಂದು ಬರೊಬ್ಬರಿ 59 ಪೀಸ್‌‌‌ ಮಾಡಿ ಫ್ರಿಡ್ಜ್‌ನಲ್ಲಿಟ್ಟು ಎಸ್ಕೇಪ್ ಆಗಿದ್ದ ಆರೋಪಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದ ಮಹಾಲಕ್ಷ್ಮೀ ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದೆ. ಕೊಲೆ ಆರೋಪಿ ರಂಜನ್ ಒಡಿಶಾದಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.ಇದರ ಬೆನ್ನಲ್ಲೇ ಮಹಾಲಕ್ಷ್ಮೀ ಕೊಲೆ ಹಿಂದಿನ ಕಾರಣ ಕೂಡ ರಿವೀಲ್ ಆಗಿದ್ದು, ಮಹಾಲಕ್ಷ್ಮಿ ಜೊತೆ ಗಲಾಟೆ ವೇಳೆ ಆಕೆ ಹೊಡೆದ ಕಾರಣಕ್ಕೆ ಸಿಟ್ಟಿನಿಂದ ಕೊಲೆ ಮಾಡಿದ್ದಾಗಿ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾನೆ ಎನ್ನಲಾಗಿದೆ.

ಮಹಾಲಕ್ಷ್ಮಿ ಕೊಂದು ಬರೊಬ್ಬರಿ 59 ಪೀಸ್‌‌‌ ಮಾಡಿ ಫ್ರಿಡ್ಜ್‌ನಲ್ಲಿಟ್ಟು ಎಸ್ಕೇಪ್ ಆಗಿದ್ದ ಮುಕ್ತಿಗಾಗಿ ಖಾಕಿ ತಲಾಶ್‌ ನಡೆಸಿತ್ತು. ಕಳೆದ 3 ದಿನಗಳಿಂದ ಒಡಿಶಾದಲ್ಲಿ ಪೊಲೀಸ್‌ ಪಡೆ ಕಾರ್ಯಾಚರಣೆ ನಡೆಸಿತ್ತು. ಇನ್ನೆನ್ನೂ ಆರೋಪಿ ಬಲೆಗೆ ಬೀಳ್ತಾನೇ ಅನ್ನೋವಷ್ಟರಲ್ಲೇ ಮುಕ್ತಿ ರಂಜನ್‌ ಸಾವಿಗೆ ಶರಣಾಗಿದ್ದಾನೆ. ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಒಡಿಶಾ ಮೂಲದ ಮುಕ್ತಿ ರಂಜನ್‌ ರಾಯ್‌‌‌ ಮಹಾಲಕ್ಷ್ಮೀ ಕೆಲಸ ಮಾಡ್ತಿದ್ದ ಫ್ಯಾಕ್ಟರಿಯಲ್ಲೇ ಕೆಲಸ ಮಾಡ್ತಿದ್ದು, ಟೀಮ್ ಹೆಡ್ ಆಗಿದ್ನಂತೆ. ಅದೇ ಸ್ಟೋರ್‌‌ನಲ್ಲಿ ಕೆಲಸ ಮಾಡ್ತಿದ್ದ ಮಹಾಲಕ್ಷ್ಮಿ ಜೊತೆ ಇನ್ನಿಲ್ಲದ ಸಲುಗೆ ಬೆಳೆಸಿಕೊಂಡಿದ್ನಂತೆ.

ಸೆಪ್ಟೆಂಬರ್‌‌ 1ರಂದು ಇಬ್ಬರೂ ಕೆಲಸಕ್ಕೆ ಹಾಜರಾಗಿದ್ದು, 2ನೇ ತಾರೀಖು ವಾರದ ರಜೆ ಪಡೆದುಕೊಂಡಿದ್ಲಂತೆ ಮಹಾಲಕ್ಷ್ಮೀ. ವಾರದ ರಜೆ ಪಡೆದು ತಾಯಿ

ಮನೆಗೆ ಬರುವುದಾಗಿ ಕುಟುಂಬಸ್ಥರಿಗೆ ಕರೆ ಮಾಡಿ ಹೇಳಿದ್ದಳಂತೆ. ಆದರೆ ಅಂದಿನಿಂದ ಕುಟುಂಬಸ್ಥರ ಸಂಪರ್ಕ ಮಾಡಿರಲಿಲ್ಲ. ಕೊಲೆ ರಹಸ್ಯ ಬೆಳಕಿಗೆ ಬರ್ತಿದ್ದಂತೆ ಮುಕ್ತಿ ರಂಜನ್‌‌‌ ಎಸ್ಕೇಪ್‌ ಆಗಿ ಒಡಿಶಾದಲ್ಲಿ ತಲೆಮರೆಸಿಕೊಂಡಿದ್ದ. ಫೋನ್‌ ಬಳಕೆ ಮಾಡದೇ ಓಡಾಡ್ತಿದ್ದು, ಇದೀಗ ಪೊಲೀಸರು ಬಂಧಿಸ್ತಾರೆ ಅಂತ ಹೆದರಿ ಸೂಸೈಡ್‌ ಮಾಡ್ಕೊಂಡಿದ್ದಾನೆ ಎನ್ನಲಾಗಿದೆ.

ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿಯಲ್ಲಿ ಪ್ರಕರಣದ ಮತ್ತಷ್ಟು ಸ್ಫೋಟಕ ಸತ್ಯಗಳು ಬಟಾಬಯಲಾಗಿವೆ. ಮಹಾಲಕ್ಷ್ಮಿ ಹೊಟ್ಟೆ ಹಾಗೂ ಎದೆಗೆ ಚಾಕುವಿನಿಂದ ಇರಿದು ದೇಹವನ್ನ ತುಂಡರಿಸಿದ್ದಾನೆ ಅನ್ನೋದು ಗೊತ್ತಾಗಿದೆ. ಆದರೆ ಸಾವಿಗೂ ಮುನ್ನ ಉಸಿರುಗಟ್ಟಿಸಿ ಕೊಲ್ಲಲಾಗಿದ್ಯಾ ಅಥವಾ ವಿಷಪ್ರಾಷಣ ಮಾಡಿಸಿದ್ನಾ ಅನ್ನೋದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಈ ಸಂಬಂಧ ಮಹಾಲಕ್ಷ್ಮಿ ಹೊಟ್ಟೆ ಹಾಗೂ ಕರುಳಿನ ಭಾಗವನ್ನ FSLಗೆ ರವಾನೆ ಮಾಡ್ಲಾಗಿದೆ.

Leave a Comment