Coastal Bulletin

ಅಬುದಾಬಿ:ಟಾಸ್ ಗೆದ್ದ ನ್ಯೂಜಿಲೆಂಡ್ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತ್ತು. ಡೇವಿಡ್ ಮಲಾನ್ ಹಾಗೂ ಮೊಯಿನ್ ಆಲಿ ಸ್ಫೋಟಕ ಬ್ಯಾಟಿಂಗ್‌ನಿಂದ ಇಂಗ್ಲೆಂಡ್ ದಿಟ್ಟ ಹೋರಾಟ ನೀಡಿತು. ಮಲಾನ್ 41 ರನ್ ಸಿಡಿಸಿದರೆ, ಮೊಯಿನ್ ಆಲಿ ಅಜೇಯ 51 ರನ್ ಸಿಡಿಸಿದರು. ಜೋಸ್ ಬಟ್ಲರ್ 29 ರನ್, ಜಾನಿ ಬೈರ್‌ಸ್ಟೋ 13, ಲಿಯಾಮ್ ಲಿವಿಂಗ್‌ಸ್ಟೋನ್ 17 ರನ್ ಕಾಣಿಕೆ ನೀಡಿದರು. ಈ ಮೂಲಕ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 166 ರನ್ ಸಿಡಿಸಿತು. 

167 ರನ್ ಟಾರ್ಗೆಟ್(Target) ನ್ಯೂಜಿಲೆಂಡ್‌ಗೆ ಕಠಿಣ ಸವಾಲಾಗಿ ಪರಿಣಮಿಸಿತು. ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಡರಿಲ್ ಮಿಚೆಲ್ ಡೆವೊನ್ ಕೊನ್ವೆ ಜೊತೆಯಾಟದಿಂದ ನ್ಯೂಜಿಲೆಂಡ್

ತಂಡಕ್ಕೆ 5 ವಿಕೆಟ್ ಗೆಲುವು ತಂದುಕೊಟ್ಟರು. ಡರಿಲ್ ಅಜೇಯ 72 ರನ್ ಸಿಡಿಸಿದರು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ 2019ರ ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿತು. 

Leave a Comment