ಮುಂಬೈ :ಹಿಂದಿ ಚಲನಚಿತ್ರ ಅಭಿನೇತೃ ಬಾಲಿವುಡ್ ನ ಹಿರಿಯ ನಟ ದಿಲೀಪ್ ಕುಮಾರ್ ಇಂದು ಮುಂಬೈ ನಲ್ಲಿ ನಿಧನರಾಗಿದ್ದಾರೆ.98 ವರ್ಷದ ದಿಲೀಪ್ ಕುಮಾರ್ ದೀರ್ಘಕಾಲದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.ದಿಲೀಪ್ ಕುಮಾರ್ ಆರೋಗ್ಯ ಕಳೆದ 5 ದಿನಗಳಿಂದ ಬಿಗುಡಾಯಿಸಿತ್ತು. ಜೂನ್ 30ರಂದು ಮುಂಬೈ ನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ಇಂದು ಮುಂಜಾನೆ 7:30 ರ ಸಮಯದಲ್ಲಿ ದಿಲೀಪ್ ಕುಮಾರ್ ವಿಧಿವಶರಾಗಿದ್ದಾರೆ ಎಂದು ಹಿಂದೂಜಾ ಆಸ್ಪತ್ರೆಯ ವೈದ್ಯ ಡಾ. ಜಲೀಲ್ ಪಾರ್ಕರ್ ಖಚಿತಪಡಿಸಿದ್ದಾರೆ.
ಹಿಂದಿ ಚಲನಚಿತ್ರ ರಂಗದ ಅಭಿನೇತೃ. ದಿಲೀಪ್ ಕುಮಾರ್ ಅವರ ಮೊದಲ ಹೆಸರು ಯೂಸೂಫ್ ಖಾನ್ ಎಂದಾಗಿತ್ತು.ತಮ್ಮ ಕಾಲದ ಅತಿ ಶ್ರೇಷ್ಠ ನಟರಲ್ಲಿ ಒಬ್ಬರೆಂದು ಅವರನ್ನು ಪರಿಗಣಿಸಲಾಗುತ್ತದೆ. ೧೯೪೪ರಿಂದ ೧೯೯೬ರವರೆಗೆ ಸುಮಾರು ೬೨ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶೋಕರಸ ಪ್ರಧಾನ ಭೂಮಿಕೆಗಳಲ್ಲಿ ಪ್ರಸಿದ್ಧರಾದ ಕಾರಣ ಅವರನ್ನು ದುರಂತ ನಾಯಕನೆಂದೂ ಕರೆಯುತ್ತಾರೆ. ಅನೇಕ ಪ್ರಶಸ್ತಿಗಳಿಂದ ಮಾನಿತರಾದ ಇವರು ಭಾರತೀಯ ಚಲನಚಿತ್ರ ರಂಗದ ಸರ್ವೋಚ್ಚ ಸನ್ಮಾನವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಪುರಸ್ಕೃತರೂ ಆಗಿದ್ದಾರೆ. ಅವರು ಭಾರತದ ರಾಜ್ಯಸಭೆಯ ಸದಸ್ಯರೂ ಆಗಿದ್ದರು.
ದಿಲೀಪ್ ಕುಮಾರ್ ಅವರು ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ದಿಲೀಪ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದೇನೆ. ದಿಲೀಪ್ ಅವರನ್ನು ಸಿನಿಮೀಯ ದಂತಕಥೆ ಎಂದು ಸ್ಮರಿಸಲಾಗುತ್ತದೆ.ದಿಲೀಪ್ ಅವರು ಸಾಟಿಯಿಲ್ಲದ ಪ್ರತಿಭೆಯನ್ನು ಹೊಂದಿದ್ದರು. ಈ ಕಾರಣದಿಂದಲೇ ಸಾಕಷ್ಟು ಪ್ರೇಕ್ಷಕರ ಮನಗೆದ್ದಿದ್ದರು. ಅವರ ನಿಧನ ನಮ್ಮ ಸಾಂಸ್ಕೃತಿಕ ಜಗತ್ತಿಗೆ ಆಗಿರುವ ದೊಡ್ಡ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.















