ಕುಲಾಲ ಸಂಘ ಬೆಂಗಳೂರು ವತಿಯಿಂದ ಅಡುಗೆ ಸ್ಪರ್ಧೆ,ಪ್ರತಿಭಾ ಪುರಸ್ಕಾರ ಮತ್ತು ಸೌಹಾರ್ದ ಕೂಟ

Coastal Bulletin
ಕುಲಾಲ ಸಂಘ ಬೆಂಗಳೂರು ವತಿಯಿಂದ ಅಡುಗೆ ಸ್ಪರ್ಧೆ,ಪ್ರತಿಭಾ ಪುರಸ್ಕಾರ ಮತ್ತು ಸೌಹಾರ್ದ ಕೂಟ

ಬೆಂಗಳೂರು :ಕುಲಾಲ ಸಂಘ ಬೆಂಗಳೂರು ವತಿಯಿಂದ ಭಾನುವಾರ ಸಂಘದ ಮಹಿಳಾ ಘಟಕದ ನೇತೃತ್ವದಲ್ಲಿ ಅಡುಗೆ ಸ್ಪರ್ಧೆ, ಸೌಹಾರ್ಧಕೂಟ, ಪ್ರತಿಭಾಪುರಸ್ಕಾರ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮವು ಬೆಂಗಳೂರಿನ ನಂದಿನಿ ಲೇಔಟ್‌ ನಲ್ಲಿರುವ ಉತ್ತರಕನ್ನಡ ಸಭಾಭವನದಲ್ಲಿ ಭಾನುವಾರ ಜರಗಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಠಲ್ ಕನೀರ್‌ತೋಟ ಅಧ್ಯಕ್ಷರು ಕುಲಾಲ ಸಂಘ ಬೆಂಗಳೂರು ಇವರು ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ರೇಖಾ ಪ್ರಭಾಕರ್ ಶಿಕ್ಷಕಿ, ಸಮೂಹ ಸಂಪನ್ಮೂಲ ವ್ಯಕ್ತಿ, ಶಿಕ್ಷಣ ಇಲಾಖೆ, ಕುಂದಾಪುರ,ಶ್ರೀಮತಿ ಪ್ರೇಮಲೀಲ ವೆಂಕಟೇಶ್ ಮಾಜಿ ರಾಜ್ಯ ಕಾರ್ಯದರ್ಶಿ ಬಿಜೆಪಿ ಮಹಿಳಾ ಮೋರ್ಚಾ ಕರ್ನಾಟಕ ಭಾಗವಹಿಸಿದ್ದರು.

ಗೌರವ ಪುರಸ್ಕಾರ

ಶ್ರೀಮತಿ ಸಂಧ್ಯಾ ಅಶೋಕ್ ಬಂಗೇರ ನೃತ್ಯಶ್ರೀ ಸಾಯಿ ಅಕಾಡೆಮಿ, ಬೆಂಗಳೂರು ಹಾಗೂ ಡಾ.ಎಸ್.ಶೆಫಾಲಿ ಇವರಿಗೆ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ

2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ

90% ಮೇಲ್ಪಟ್ಟು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.


ಕುಲಾಲ ಬಾಂಧವರಿಗೆ ವಿವಿಧ ಸ್ಪರ್ಧೆಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು.ಅಡುಗೆ ಸ್ಪರ್ಧೆ, ಸಂಗೀತ, ನೃತ್ಯ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.ಅಡುಗೆ ಸ್ಪರ್ಧೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ  ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಿಶೇಷವಾಗಿ ಸ್ಪರ್ಧೆಯಲ್ಲಿ  ಚಿಕ್ಕನ್ ಸುಕ್ಕ ಹಾಗೂ ಬಂಗುಡೆ ಗಸಿ ತಯಾರಿ ಸ್ಪರ್ಧೆಯು ಎಲ್ಲರ ಗಮನ ಸೆಳೆಯಿತು.

ಸುಮಾರು 600ಕ್ಕೂ ಹೆಚ್ಚಿನ ಸಮಾಜ ಭಾಂದವರು ಕುಟುಂಬ ಸಮೇತರಾಗಿ ಸಂಖ್ಯೆಯಲ್ಲಿ  ಭಾಗವಹಿಸಿ ಕಾರ್ಯಕ್ರಮವನ್ನು ಮೆರುಗುಗೊಳಿಸಿದರು.

Leave a Comment