ಶ್ರೇಷ್ಠ ಹಸಿರು,ಸ್ವಚ್ಚ ಶಾಲೆ ಪ್ರಶಸ್ತಿಗೆ ಸರಕಾರಿ ಪ್ರೌಢಶಾಲೆ ಬೈಲೂರು ಆಯ್ಕೆ.

Coastal Bulletin
ಶ್ರೇಷ್ಠ ಹಸಿರು,ಸ್ವಚ್ಚ ಶಾಲೆ ಪ್ರಶಸ್ತಿಗೆ ಸರಕಾರಿ ಪ್ರೌಢಶಾಲೆ ಬೈಲೂರು ಆಯ್ಕೆ.

ಬೈಲೂರು: ಶ್ರೇಷ್ಠ ಹಸಿರು,ಸ್ವಚ್ಚ ಶಾಲೆ ಪ್ರಶಸ್ತಿಗೆ ಸರಕಾರಿ ಪ್ರೌಢಶಾಲೆ ಬೈಲೂರು ಆಯ್ಕೆಯಾಗಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಕೊಡಮಾಡುವ ಪ್ರತಿಷ್ಠಿತ ಶ್ರೇಷ್ಠ ಹಸಿರು ಮತ್ತು ಸ್ವಚ್ಛ ಶಾಲೆ ಪ್ರಶಸ್ತಿಗೆ ಕಾರ್ಕಳ ತಾಲೂಕಿನ  ಸರಕಾರಿ ಪ್ರೌಢಶಾಲೆ  ಬೈಲೂರು ಆಯ್ಕೆಯಾಗಿದೆ. ಸರಕಾರಿ ಶಾಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ವಚ್ಛತೆ ಮತ್ತು ಸುಸ್ಥಿರತೆಯಲ್ಲಿ ಉತ್ತಮ ಸಾಧನೆ

ಮಾಡಿರುವ ಶಾಲೆಗಳನ್ನು ಆಯ್ಕೆ ಮಾಡಿ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾಗಲು 22 ಮಾನದಂಡಗಳಿದ್ದು, ಟ್ರಸ್ಟ್‌ನ ತಂಡ ಅರ್ಜಿ ಸಲ್ಲಿಸಿದ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆಯ ಬಳಿಕ ಪ್ರಶಸ್ತಿಗಳಿಗೆ ಆಯ್ಕೆ ನಡೆಯುತ್ತದೆ. ಈ ನಿಟ್ಟಿನಲ್ಲಿ ಪ್ರಶಸ್ತಿಗೆ  ಸರಕಾರಿ ಪ್ರೌಢಶಾಲೆ ಬೈಲೂರು ಆಯ್ಕೆಯಾಗಿದೆ.

Leave a Comment