ಮೂಡುಬಿದಿರೆ: ಕಂಬಳ ಓಟಗಾರರಾಗಿ ದಾಖಲೆಗಳ ಸಾಧನೆಯಿಂದ ಗಮನ ಸೆಳೆದಿದ್ದ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಇದೀಗ ಮಾಡೆಲಿಂಗ್ ರಂಗದಲ್ಲೂ ಮಿಂಚಲಾರಂಭಿಸಿದ್ದಾರೆ. ಕರಾವಳಿಯ ಹಸಿರು ನಿಸರ್ಗದ ಹಿನ್ನೆಲೆಯಲ್ಲಿ ಓಟದ ಕೋಣದ ಜತೆ ಆಭರಣಗಳ ಅಲಂಕಾರದೊಂದಿಗೆ ತನ್ನ ಕಟ್ಟುಮಸ್ತಾದ ದೇಹಸಿರಿಯೊಂದಿಗೆ ನಗುಮೊಗದೊಂದಿಗೆ ನಿಂತ ಗೌಡರ ದೊಡ್ಡ ಫ್ಲೆಕ್ಸುಗಳು ಈಗ ಕರಾವಳಿಯಲ್ಲಿ ಎಲ್ಲರ ಗಮನ ಸೆಳೆಯಲಾರಂಭಿಸಿವೆ.
ಕೈಬೆರಳುಗಳ ತುಂಬಾ ವೈವಿಧ್ಯಮಯ ಉಂಗುರಗಳು, ಕೈಗೊಂದು ಕಡಗ, ಬ್ರಾಸ್ಲೈಟ್, ಪೆಂಡೆಂಟ್ ಸಹಿತ ಚಿನ್ನದ ಹಾರ ಹೀಗೆ ಪುರುಷರೂ ಸ್ಣಣರ್ಾಲಂಕಾರ ಹೇಗೆ ಮಾಡಿಕೊಳ್ಳಬಹುದು ಎನ್ನುವುದಕ್ಕೆ ಮಾದರಿಯಾಗಿ ನಿಂತ ಗೌಡರು ಹೂನಗೆ ಚೆಲ್ಲಿದ್ದಾರೆ. ಜತೆಗಿರುವ ಕಂಬಳದ ಕೋಣ 'ಅಪ್ಪು' ಮಿಜಾರು ಪ್ರಸಾದ್ ನಿಲಯದ ಶಕ್ತಿ ಪ್ರಸಾದ್ ಶೆಟ್ಟಿ ಯವರದ್ದಾಗಿದ್ದು ಈಗಾಗಲೇ ಹಲವು ಪದಕಗಳನ್ನು ಗೆದ್ದ ಸಾಧಕ ಕೂಡ!.
ಕಂಬಳದಲ್ಲಿ ಸಾಧನೆಯ ಸರದಾರನಾಗಿ ಗುರುತಿಸಿಕೊಂಡ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಈ ನಡುವೆ ಸೂಪರ್ ಹಿಟ್ ಸಿನಿಮಾ ಬಾಹುಬಲಿಯಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಈಗ ಮಾಡೆಲಿಂಗ್ಗೆ ಆಹ್ವಾನಿತರಾಗಿರುವ
ಅವರು ಪಂಚಭಾಷೆಗಳಲ್ಲಿ ನಿಮರ್ಾಣಗೊಳ್ಳುತ್ತಿರುವ ಬಿದರ್್ದ ಕಂಬಳ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಹೊಸ ಅವಕಾಶವನ್ನು ಬಳಸಿಕೊಂಡಿದ್ದೇನೆ ಎನ್ನುವ ಗೌಡರಿಗೆ ತನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿರುವ ಬಗ್ಗೆ ಸಂತಸವಿದೆ.
ಜಾಹೀರಾತುಗಳಲ್ಲಿಯೂ ಕರಾವಳಿಯ ಪ್ರತಿಭೆಗಳನ್ನು, ಇಲ್ಲಿನ ಸೊಬಗು ವೈಭವವನ್ನು ಎಲ್ಲೆಡೆ ಪರಿಚಯಿಸಬೇಕೆಂಬ ಉತ್ಸಾಹದಿಂದ ಹೊಸಪ್ರಯೋಗಕ್ಕೆ ಇಳಿದಿದ್ದೇವೆ. ಉಡುಪಿಯ ನೇಯ್ಗೆ, ಶಂಕರಪುರ ಮಲ್ಲಿಗೆ, ಅಡಿಕೆ ಕೃಷಿಯ ರೈತ ಹೀಗೆ ಹತ್ತು ಹಲವು ಪರಿಕಲ್ಪನೆಗಳನ್ನು ಪರಿಚಯಿಸಿದ್ದೇವೆ. ಕರಾವಳಿಯ ಸಾಧಕಿ ಸಿನಿ ಶೆಟ್ಟಿಯನ್ನೂ ಬಳಸಿಕೊಳ್ಳುತ್ತಿದ್ದೇವೆ. ಕರಾವಳಿಯ ಸಾಂಸ್ಕೃತಿಕ ವೈಭವ, ಪ್ರಾಕೃತಿಕ ಸೊಬಗು ಯಾವುದಕ್ಕೂ ಕಡಿಮೆಯಿಲ್ಲ ಎನ್ನುವುದನ್ನೂ ತೋರಿಸಿಕೊಡಬೇಕಿದೆ ಎಂದು ಆಭರಣದ ಮಹೇಶ್ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.














