ಬಂಟ್ವಾಳ : ತಾಲೂಕಿನ ತುಂಬೆಯ ರಂಗ ಕಲಾವಿದ ಕಲಾ ಪೋಷಕ ಸಾಮಾಜಿಕ ಧಾರ್ಮಿಕ ಮುಂದಾಳು ಸದಾಶಿವ ಡಿ ತುಂಬೆ ಇವರಿಗೆ2024-25ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಲಭಿಸಿದೆ.
ಇಂಚರ ಕಲಾವಿದರು ತುಂಬೆ ಎಂಬ ನಾಟಕ ತಂಡವನ್ನು ಕಟ್ಟಿ ಅ ಮೂಲಕ ನಾಟಕವನ್ನು ಪ್ರದರ್ಶಿಸಿ, ಕಲಾವಿದರನ್ನು ಬೆಳೆಸುವ ಹಾಗೂ ಕಲಾ ತಂಡಗಳನ್ನು ಪೋಷಿಸುವ ಕಾರ್ಯ ಮಾಡುತಿದ್ದರು, ಅಲ್ಲದೆ ಅನೇಕ ಸಾಮಾಜಿಕ
ಧಾರ್ಮಿಕ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದರು, ಇವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗೌರವಿಸಿತ್ತು. ಕಲಾ ಕ್ಷೇತ್ರದ ಇವರ ಸೇವೆ ಗುರುತಿಸಿ ಈ ಸಲದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.















