ಫರಂಗಿಪೇಟೆ: ಸೇವಾಂಜಲಿ ಸಂಗೀತ ತರಗತಿಯ ವಾರ್ಷಿಕೋತ್ಸವ ಸಮಾರಂಭ.

Coastal Bulletin
ಫರಂಗಿಪೇಟೆ: ಸೇವಾಂಜಲಿ ಸಂಗೀತ ತರಗತಿಯ ವಾರ್ಷಿಕೋತ್ಸವ ಸಮಾರಂಭ.

ಬಂಟ್ವಾಳ :ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇಲ್ಲಿ ನಡೆಯುವ ಸೇವಾಂಜಲಿ ಸಂಗೀತ ತರಗತಿಯ ವಾರ್ಷಿಕೋತ್ಸವ ಸಮಾರಂಭವು ಫೆ.01ರಂದು ಆದಿತ್ಯವಾರ ಸಂಜೆ 4-30ರಿಂದ ಸೇವಾಂಜಲಿ ಸಭಾಗೃಹದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಬಿ. ರಾಮಚಂದ್ರ ರಾವ್ ಬಿ.ಸಿ.ರೋಡು, ನಿವೃತ್ತ ಮುಖ್ಯೋಪಾಧ್ಯಾಯರು ನೆರವೇರಿಸಲಿದ್ದಾರೆ,ಕವಿತಾ ದೇವದಾಸ್ ಉಪನ್ಯಾಸಕರು, ತುಂಬೆ ಪದವಿಪೂರ್ವ ಕಾಲೇಜು ಇವರು ಉಪಸ್ಥಿತರಿರುವರು.

ಸರಸ್ವತಿ ಪೂಜೆ, ಗುರುವಂದನೆ,ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ

ಸಂಗೀತ ಮತ್ತು ದೇವರ ನಾಮಗಳು,ಸಂಜೆ ಗಂಟೆ 6.30ರಿಂದ ಸುಗಮ ಸಂಗೀತ ಭಾವಗಾನ ನಡೆಯಲಿದೆ ಎಂದು ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment