Coastal Bulletin

ಬಂಟ್ವಾಳ :ದಕ್ಷಿಣ ಕನ್ನಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು ಇದರ ವತಿಯಿಂದ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ನ ಅಮ್ಟಾಡಿ ಮತ್ತು ಕೂರಿಯಾಳ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವಾಗಿ ಘೋಷಣೆ ಮಾಡಲಾಗಿದೆ.

(ಪ್ರತೀ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ) ಜಲ ಜೀವನ್ ಮಿಷನ್ ಆಶಯದಂತೆ ಎಲ್ಲಾ ಮನೆಗಳಿಗೂ ನಳ್ಳಿ ಸಂಪರ್ಕ ಕಲ್ಪಿಸಲಾಗಿದ್ದು ಈಗ ಪಂಚಾಯತ್ ತನ್ನ ಗುರಿ ಮುಟ್ಟಿದೆ. ಡಿಸೆಂಬರ್ 29 ರಂದು ಗುರುವಾರ  ಅಮ್ಟಾಡಿ ಗ್ರಾಮ  ಪಂಚಾಯತ್ ನಲ್ಲಿ ಹರ್ ಘರ್ ಜಲ್ ಘೋಷಣೆ ಕಾರ್ಯಕ್ರಮ ನಡೆಸಲಾಯಿತು.

ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ  ಮೋಹಿನಿ , ಉಪಾಧ್ಯಕ್ಷ ಸುನಿಲ್ ಕುಮಾರ್,  ಪಂ. ಅ. ಅಧಿಕಾರಿಗಳು ˌ ಪಂಚಾಯತ್ ಸದಸ್ಯರುˌ ಪಂಪು ಚಾಲಕರುˌ ಪಂಚಾಯತ್ ಸಿಬ್ಬಂದಿಗಳುˌ , ಗ್ರಾಮಸ್ಥರು ಹಾಗೂ ಫಲಾನುಭವಿಗಳ ಸಮ್ಮುಖದಲ್ಲಿ ಅಮ್ಟಾಡಿ ಗ್ರಾಮವನ್ನು ಹರ್ ಘರ್ ಜಲ್

ಗ್ರಾಮವೆಂದು ಘೋಷಣೆ ಮಾಡಲಾಯಿತು ಪಂಚಾಯತ್ ಅಧ್ಯಕ್ಷರು ಮಾತನಾಡಿ ಜಲಜೀವನ್ ಮಿಷನ್ ನ ಅನುಷ್ಠಾನ ಯಶಸ್ವಿಯಾಗಿದೆ . ಸರ್ಕಾರದ ಈ ಯೋಜನೆ ಗ್ರಾಮದ ಪ್ರತಿಯೋಬ್ಬರಿಗೂ ಶುದ್ಧ ಮತ್ತು ಸುರಕ್ಷಿತ ನೀರು ಒದಗಿಸಿ ಕೊಡುವಲ್ಲಿ ಸಫಲವಾಗಿದೆ ಆದುದರಿಂದ ಅಮ್ಟಾಡಿ ಮತ್ತು ಕೂರಿಯಾಳ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವೆಂದು ಘೋಷಿಸಲು ಸಂತೋಷವಾಗುತ್ತದೆ ಎಂದು ತಿಳಿಸಿದರು.

ಜಲಜೀವನ್ ಮಿಷನ್ ನ ಯೋಜನಾ ವ್ಯವಸ್ಥಾಪಕ ಶ್ರೀ ವಿಘ್ನೇಶ್ ರಾಜ್ˌ  ಅನುಷ್ಠಾನ ಬೆಂಬಲ ಸಂಸ್ಥೆಯ  ಚರಣ್ ರಾಜ್ˌ  ಇಂಜಿನಿಯರ್ ನಾಸೀರ್ ಹಾಗು ಅಶ್ವಿನ್  ಅನುಷ್ಠಾನ ಬೆಂಬಲ ಸಂಸ್ಠೆ - 2ನ ಸಿಬ್ಬಂದಿ  ವಿಲ್ಮಾ ಉಪಸ್ಠಿತರಿದ್ದರು.

Leave a Comment