ಮಂಗಳೂರು : ಜಿಲ್ಲೆಯ ಹಿರಿಯ ಪತ್ರಕರ್ತ ಸಮಾಜಸೇವಕ, ಅಬ್ಬಕ್ಕ ದೃಶ್ಯ ಮಾಧ್ಯಮದ ಆಡಳಿತ ನಿರ್ದೇಶಕ ಶಶಿಧರ್ ಪೊಯ್ಯತ್ತಬೈಲ ಅವರಿಗೆ ಈ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವ ಸಲುವಾಗಿ ಅವರಿಗೆ ಅಭಿನಂದನೆ ಸಲ್ಲಿಸಲು ಜಿಲ್ಲೆಯ ಕುಲಾಲ ಸಮಾಜ ಬಂದುಗಳು ಅಬ್ಬಕ್ಕ ಟಿವಿ ಕಾರ್ಯಾಲಯದಲ್ಲಿ ಸನ್ಮಾನಿಸಿದರು.
ಸನ್ಮಾನವನ್ನು ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಲ್ಲಾಳ್ ಅಭಿನಂದನೆಯನ್ನು ಸಲ್ಲಿಸಿ ಪತ್ರಕರ್ತರ ಸೇವಾ ಕಾರ್ಯಗಳಿಂದ ನಾಡು ಮತ್ತು ದೇಶ ಅಭಿವೃದ್ಧಿಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಕುಲಾಲ ಸಮಾಜದ ಬಹಳಷ್ಟು ಯುವಕರು ಪತ್ರಿಕಾ ಮಾಧ್ಯಮದಲ್ಲಿ ಬೆಳೆಯುತ್ತಿರುವುದನ್ನು ಕಂಡಾಗ ಸಂತೋಷವಾಗುತ್ತಿದೆ. ಶಶಿಧರ್ ಪತ್ರಕರ್ತರಾಗಿ ಸುಧೀರ್ಘಕಾಲ ಸೇವೆ ಮಾಡಿದ್ದಾರೆ ಅವರ ಸೇವಾಕಾರಿಗಳನ್ನು ಸರಕಾರ ಗುರುತಿಸಿರುವುದು ಅಭಿನಂದನೆಯ. ಸಮಾಜದ ಯುವ ಪತ್ರಕರ್ತರು ಕುಲಾಲ ಸಮಾಜದ ಅಭಿವೃದ್ಧಿಗೆ ಪೂರಕವಾಗುವ ಸೇವಾ ಕಾರ್ಯಗಳನ್ನು ಮಾಡಿ ಸಹಭಾಗಿಗಳಾಗಬೇಕು ಎಂದು ನುಡಿದರು.
ಸನ್ಮಾನವನ್ನು ಸ್ವೀಕರಿಸಿದ ಮಾತನಾಡಿದ ಪತ್ರಕರ್ತ ಶಶಿಧರ್ ರವರು ಸಮಾಜ ಬಾಂಧವರು ನೀಡಿರುವ ಸನ್ಮಾನ ತವರು ಮನೆಯ ಗೌರವವಾಗಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡುವ ಕ್ರಮ ಅತ್ಯುತ್ತಮವಾಗಿದೆ. ಪ್ರಶಸ್ತಿಯೊಂದಿಗೆ ಲಕ್ಷ ರೂಪಾಯಿ ನೀಡುವುದಕ್ಕಿಂತ ಆಯ್ಕೆಗೆ ಲಕ್ಷ ನೀಡಿ ಪ್ರಶಸ್ತಿ ನೀಡಿರುವುದು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ
ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಲ್ಲಾಳ್. ಗೌರವ ಪ್ರಧಾನ ಕಾರ್ಯದರ್ಶಿ ಸದಾಶಿವ ಕುಲಾಲ್, ಜೊತೆ ಕಾರ್ಯದರ್ಶಿ ಪ್ರದೀಪ್ ಅತ್ತಾವರು ,ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಟ್ರಸ್ಟಿ ಪುರುಷೋತ್ತಮ ಕುಲಾಲ್ ಕಲ್ಪಾವಿ, ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷ ಎ ದಾಮೋದರ್, ಗೌರವ ಪ್ರಧಾನ ಕಾರ್ಯದರ್ಶಿ ಎಂ ಪಿ ಬಂಗೇರ, ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರದ ಪ್ರಧಾನ ಸಂಚಾಲಕ ಸುರೇಶ್ ಕುಲಾಲ್ ಮಂಗಳದೇವಿ, ವೀರನಾರಾಯಣ ಸೇವಾ ಟ್ರಸ್ಟಿನ ಅಧ್ಯಕ್ಷ ಬಿ ಪ್ರೇಮಾನಂದ ಕುಲಾಲ್ ಕೊಡಿಕಲ್ , ಶ್ರೀ ವೀರನಾರಾಯಣ ಸೇವಾ ಸಮಿತಿಯ ಅಧ್ಯಕ್ಷ ಸುಂದರ್ ಕುಲಾಲ್ ಶಕ್ತಿನಗರ .ದೇವಸ್ಥಾನದ ಟ್ರಸ್ಟಿ ಗಿರಿಧರ್ ಜೆ ಮೂಲ್ಯ, ಹಾಗೂ , ಶ್ರೀ ವೀರನಾರಾಯಣ ದೇವಸ್ಥಾನದ ಮುಂಬಯಿ ಸಮಿತಿಯ ಅಧ್ಯಕ್ಷ ಪತ್ರಕರ್ತ ದಿನೇಶ್ ಕುಲಾಲ್.ವಿಶ್ವ ಭಾರತಿ ಫ್ರೆಂಡ್ಸ್ ಸರ್ಕಲ್ ಕೊಡಿಕಲ್ ನ ಮಾಜಿ ಅಧ್ಯಕ್ಷ ರಾಜೇಶ್ ಸಾಲಿಯಾನ್, ಗೌರವಿಸಲಾಗುವುದು.















