ಉಪ್ಪಿನಂಗಡಿ; ಆಟೋಗೆ ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನ ಢಿಕ್ಕಿ ಹೊಡೆದ ಪರಿಣಾಮ ಆಟೋಚಾಲಕ ಮೃತಪಟ್ಟ ಘಟನೆ ಉಪ್ಪಿನಂಗಡಿ ನೆಕ್ಕಿಲಾಡಿ ಬಳಿ ನಡೆದಿದೆ.
ಉಪ್ಪಿನಂಗಡಿ ಸುಭಾಶ್ ನಗರ ನಿವಾಸಿ ವಾಸು ಪೂಜಾರಿ ಮೃತ ರಿಕ್ಷಾ ಚಾಲಕ ಎನ್ನಲಾಗಿದೆ.
ಉಪ್ಪಿನಂಗಡಿ ಕಡೆ ತೆರಳುತ್ತಿದ್ದ ಆಟೋಗೆ ಮಂಗಳೂರು
ಕಡೆಗೆ ತೆರಳುವ ಎಟಿಎಂ ಹಣ ಸಾಗಿಸುವ ವಾಹನ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ಮಾಡಿದ್ದಾರೆ.















