Coastal Bulletin

ಬಂಟ್ವಾಳ :ತುಂಬೆ ಗ್ರಾಮ ಪಂಚಾಯತ್ ಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮ ಡಿಜಿ ವಿಕಸನ ತುಂಬೆ ಡೆಲ್ ಮತ್ತು ಶಿಕ್ಷಣ ಫೌಂಡೇಶನ್ ವತಿಯಿಂದ ಡಿಜಿಟಲ್ ಗ್ರಂಥಾಲಯ ಅನುಷ್ಠಾನದ ಕಾರ್ಯಕ್ರಮವು ತುಂಬೆ ಗ್ರಾ ಪಂ. ಸಭಾಂಗಣದಲ್ಲಿ ಇತ್ತೀಚಿಗೆ ನಡೆಯಿತು.

ತುಂಬೆ ಗ್ರಾ ಪಂ ಅಧ್ಯಕ್ಷ ಪ್ರವೀಣ್ ಬಿ ತುಂಬೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅಭಿವೃದ್ಧಿ ಹೊಂದುತ್ತಿರುವ ತುಂಬೆ ಗ್ರಾ ಪಂ.ವ್ಯಾಪ್ತಿಯಲ್ಲಿರುವ 12ರಿಂದ 60 ವರ್ಷದವರಿಗೆ,ಕಂಪ್ಯೂಟರ್, ಇಂಟರ್ ನೆಟ್, ಬ್ಯಾಂಕ್ ವಹಿವಾಟು, ವೃತ್ತಿ ಮಾರ್ಗದರ್ಶನ, ಸಂವಹನ ಕೌಶಲ್ಯದ ಬಗ್ಗೆ ಮಾಹಿತಿ ಕಾರ್ಯಗಾರವು ಪಂಚಾಯತ್ ಗ್ರಂಥಾಲಯದಲ್ಲಿ ಪ್ರತಿ ಬಾನುವಾರ 10 ರಿಂದ12ಗಂಟೆ ವರೆಗೆ ನಡೆಯಲಿದೆ. ಇದರ ಸದುಪಯೋಗವನ್ನು ಗ್ರಾಮದ ಜನತೆ ಪಡೆದು ಕೊಳ್ಳಿ ಎಂದು ಹೇಳಿದರು.

ಗ್ರಂಥಾಲಯ ಮೇಲ್ವಿಚಾರಕಿ ಅಶ್ವಿನಿ ಸ್ವಾಗತಿಸಿ ಶಿಕ್ಷಣ ಫೌಂಡೇಶನ್ ಸಂಯೋಜಕ

ರಕ್ಷಿತ್ ಪ್ರಸ್ತಾವಿಕ ನುಡಿ ನೀಡಿದರು.ವಸೀಂ ಧನ್ಯವಾದವಿತ್ತರು.

ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಜಯಂತಿ ಕೇಶವ, ಹಾಗೂ ಪಿ ಡಿ ಒ ಚಂದ್ರಾವತಿ, ಸದಸ್ಯರಾದ ಇಬ್ರಾಹಿಂ ವಳವೂರು, ಅಬ್ದುಲ್ ಅಝೀಝ್, ಮಹಮ್ಮದ್ ಜಹೂರ್ , ಶಶಿಕಲಾ ಮನೋಹರ ಕೊಟ್ಟಾರಿ, ಹೇಮಲತಾ ಜಿ ಪೂಜಾರಿ, ಜಯಂತಿ ಶ್ರೀಧರ, ಜಯಂತಿ ನಾಗೇಶ್, ಲೆಕ್ಕ ಸಹಾಯಕಿ ಚಂದ್ರಕಲಾ ಹಾಗೂ ಪಂಚಾಯತ್ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

Leave a Comment