ಬಂಟ್ವಾಳ: ಇಲ್ಲಿನ ಬಿ.ಸಿ.ರೋಡಿನಲ್ಲಿ ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘದ ವತಿಯಿಂದ 'ಉಚಿತ ವೃತ್ತಿ ಮಾರ್ಗದರ್ಶನ ಸಹಿತ ಉದ್ಯೋಗ ನೋಂದಣಿ ಕಾರ್ಡ್ ಮತ್ತು ಸಸಿ ವಿತರಣೆ' ಕಾರ್ಯಕ್ರಮ ಭಾನುವಾರ ನಡೆಯಿತು. ಹಿರಿಯ ತೋಟಗಾರಿಕಾ ನಿರ್ಧೆಶಕ ಜೋ. ಪ್ರದೀಪ್ ಡಿಸೋಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 'ಗಿಡಗಳು ಸದೃಢವಾಗಿ ಬೆಳೆಯಲು ನೀರು, ಗೊಬ್ಬರ, ಪೋಷಕಾಂಶ ನೀಡುವಂತೆ ಸಮುದಾಯದ ಯುವಕ ಯುವತಿಯರಿಗೆ ಸರಿಯಾದ ಮಾರ್ಗದರ್ಶನ ನೀಡಿದಾಗ ಸಮಾಜದಲ್ಲಿ ಅವು ಸದೃಢ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಸತೀಶ್ ಅರಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನೋಂದಣಾಧಿಕಾರಿ ಕವಿತಾ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಹಾರಾರ್ಪಣೆ ಸಲ್ಲಿಸಿದರು.
ವಲಯಾರಣ್ಯಧಿಕಾರಿ ರಾಜೇಶ್ ಬಳಿಗಾರ್, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾವತಿ, ಕಾರ್ಮಿಕ ಕಲ್ಯಾಣಾಧಿಕಾರಿ ಮರ್ಲಿನ್ ಗ್ರೇಸಿ ಡಿಸೋಜಾ, ವಕೀಲರಾದ ಉಮೇಶ್ ಕುಮಾರ್
ವೈ., ತುಳಸಿದಾಸ್ ವಿಟ್ಲ, ಪತ್ರಕರ್ತ ಸಂದೀಪ್ ಸಾಲ್ಯಾನ್, ಪುರಸಭೆ ಅಧಿಕಾರಿ ಅಬ್ದುಲ್ ರಝಾಕ್, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕಿ ಶಾಂಭವಿ ರಾವ್, ಜಿಲ್ಲಾ ಉದ್ಯೋಗ ಮತ್ತು ವಿನಿಮಯ ಇಲಾಖೆ ಅಧಿಕಾರಿ ಮಂಜೂಷ ಮತ್ತಿತರರು ಇದ್ದರು.
ಸಂಘದ ಕಾರ್ಯದರ್ಶಿ ವೆಂಕಟೇಶ್ ಕೃಷ್ಣಾಪುರ ಸ್ವಾಗತಿಸಿ, ಪ್ರೇಮ್ ರಾಜ್ ದ್ರಾವಿಡ ವಂದಿಸಿದರು. ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.















