Coastal Bulletin

ಬಂಟ್ವಾಳ:ದೇಶಾದ್ಯಂತ ಸುಮಾರು 65 ಲಕ್ಷ ಬೀಡಿ ಕಾರ್ಮಿಕರು ಸೇರಿದಂತೆ ಸುಮಾರು 3 ಕೋಟಿಗೂ ಮಿಕ್ಕಿ ಮಂದಿ ಕಾಮರ್ಿಕರು ಜೀವನವು ಕೇಂದ್ರ ಸಕರ್ಾರದ ಕಾಮರ್ಿಕ ವಿರೋಧಿ ನೀತಿಯಿಂದ ಕಂಗೆಟ್ಟಿದೆ. ಇವರಿಗೆ ಕನಿಷ್ಟ ಕೂಲಿ, ತುಟ್ಟಿ ಭತ್ತೆ ಹೆಚ್ಚಳ, ಪಯರ್ಾಯ ಉದ್ಯೋಗ ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಸಕರ್ಾರ ತೀರಾ ನಿರ್ಲಕ್ಷ್ಯ ವಹಿಸಿ ಮೌನ ಧೋರಣೆ ಅನುಸರಿಸಿದೆ ಎಂದು ಬೀಡಿ ಕಾರ್ಮಿಕರ ಸಂಘಟನೆ ರಾಜ್ಯಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ. ಇಲ್ಲಿನ ಬಿ.ಸಿ.ರೋಡು ಆಡಳಿತ ಸೌಧ ಎದುರು ಬೀಡಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಅಭಿವೃದ್ಧಿ ಮಂತ್ರ ಜಪಿಸುವ ಡಬ್ಬಲ್ ಇಂಜಿನ್ ಸಕರ್ಾರ ಬೀಡಿ ಕಾಮರ್ಿಕರ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಟೀಕಿಸಿದರು.

ಕಾರ್ಮಿಕ ಮುಖಂಡರಾದ

ಉದಯ ಕುಮಾರ್, ಜಯಂತಿ ಬಿ. ಶೆಟ್ಟಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಪ್ರಮುಖರಾದ ಜಯಲಕ್ಷ್ಮಿ, ಲೋಲಾಕ್ಷಿ, ಗಿರಿಜಾ, ವಿಮಲ, ಸರಸ್ವತಿ, ಚಂದ್ರ ಪೂಜಾರಿ, ಜನಾರ್ಧನ ಕುಲಾಲ್ ಮತ್ತಿತರರು ಇದ್ದರು.

Leave a Comment