ಬಂಟ್ವಾಳ: ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಸಂಘದ ವ್ಯಾಪ್ತಿಯಲ್ಲಿ ಹಡಿಲು ಗದ್ದೆಗಳಲ್ಲಿ ಕೃಷಿ ನಡೆಸಿದ ಭತ್ತ ಬೇಸಾಯಗಾರರಿಗೆ ಸಮ್ಮಾನ ಕಾರ್ಯಕ್ರಮ ಸಂಘದ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಅಧ್ಯಕ್ಷತೆ
ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹಡಿಲು ಗದ್ದೆಗಳಲ್ಲಿ ಭತ್ತ ಬೇಸಾಯಗಾರರಿಗೆ ಉತ್ತೇಜನ ಮತ್ತು ಪ್ರೇರಣೆ ನೀಡುವ ಸಲುವಾಗಿ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದಿಂದ ಮುಂದಿನ ಸಾಲಿನಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಕರಾವಳಿಯ ಜನರಿಗೆ ಬೇಕಾಗುವಷ್ಟು ಕುಚ್ಚಿಲು ಅಕ್ಕಿ ಕರಾವಳಿಯಲ್ಲಿ ಬೆಳೆಯ ಬೇಕು ಎಂಬ ನಿಟ್ಟಿನಲ್ಲಿ ಕರಾವಳಿಯಲ್ಲಿ ಹಡಿಲು ಬಿದ್ದ ಗದ್ದೆಗಳಲ್ಲಿ ಭತ್ತ ಬೇಸಾಯ ಮಾಡಬೇಕು ಎಂಬುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಆಶಯದಂತೆ ಸಿದ್ದಕಟ್ಟೆ ಸಹಕಾರಿ ಸಂಘವು ಕಾರ್ಯೋನ್ಮುಖವಾಗಿ ಸಂಘದ ವ್ಯಾಪ್ತಿಯಲ್ಲಿ ರೈತರಿಗೆ ಆಧಾರರಹಿತ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದರೊಂದಿಗೆ ಭತ್ತ ಬೇಸಾಯಕ್ಕೆ ಬೇಕಾಗುವ ಬಿತ್ತನೆ ಬೇಜ, ಉಳುಮೆಗೆ ಟ್ರ್ಯಾಕ್ಟರ್, ರಸಗೊಬ್ಬರ ನೀಡಿ,ತಜ್ಞರಿಂದ ಸಲಹೆ ನೀಡಲಾಗಿದೆ. ಮುಂದಿನ ಸಾಲಿನಿಂದ ಹಡಿಲು ಗದ್ದೆಗಳಲ್ಲಿ ಭತ್ತ ಬೇಸಾಯಕ್ಕೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಲಾಗಿದೆ. ಭತ್ತ ಬೇಸಾಯಗಾರರಿಗೆ ಉತ್ತೇಜನ ಮತ್ತು ಪ್ರೇರಣೆ ನೀಡುವ ಸಲುವಾಗಿ ಗೌರವಿಸಲಾಗಿದೆ ಎಂದರು.
ಪೂಂಜ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರತ್ನಕುಮಾರ್ ಚೌಟ ಅವರು ರೈತರನ್ನು
ಸಮ್ಮಾನಿಸಿ ಮಾತನಾಡಿ, ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘವು ಕೃಷಿಕರಿಗೆ ಸಾಲ ಸೌಲಭ್ಯ ನೀಡುವುದರೊಂದಿಗೆ ಹಡಿಲು ಬಿದ್ದಗದ್ದೆಗಳಲ್ಲಿ ಭತ್ತ ಬೇಸಾಯ ಮಾಡುವವರಿಗೆ ಸಹಕಾರ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿರುತ್ತದೆ. ಸಂಘವು ಭತ್ತ ಬೇಸಾಯಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ಜಿಲ್ಲೆಯ ಇತರ ಸಹಕಾರಿ ಸಂಘಗಳು ನೀಡಿದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೇಸಾಯ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ ಅವರು ಮಾಹಿತಿ ನೀಡಿ ದರು.
ರೈತರಾದ ರಾಜೇಶ್ ಶೆಟ್ಟಿ, ಅರಳ, ಪದ್ಮನಾಭ ಪುಜಾರಿ ಕರ್ಪೆ, ಸದಾಶಿವ ಪ್ರಭು ಕರ್ಪೆ, ಅಶೋಕ್ ಪಂಡಿತ್ ಕರ್ಪೆ, ಸುಂದರ ಭಂಡಾರಿ ರಾಯಿ, ಎಂ.ಗೋವಿಂದ ಕೆಂಗರೊಟ್ಟು, ದೇವಪ್ಪ ಗೌಡ ಕಣಿಯೂರು, ಸುರೇಶ್ ಅಮಿನ್ ರಾಯಿ, ಕೃಷ್ಣರಾಜ್ ಜೈನ್ ಪಂಜಿಕಲ್ , ದಾಮೋದರ ಪುಜಾರಿ ಗಾಡಿಪಾಲ್ಕೆ ಅವರನ್ನು ಸಮ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಸತೀಶ್ ಪುಜಾರಿ ಹಲಕ್ಕೆ, ನಿರ್ದೇಶಕರಾದ ಸಂದೇಶ್ ಶೆಟ್ಟಿ ಪೊಡುಂಬ, ದಿನೇಶ್ ಪೂಜಾರಿ, ಹರೀಶ್ ಆಚಾರ್ಯ ರಾಯಿ, ಉಮೇಶ್ ಗೌಡ ಮಂಚಕಲ್ಲು, ಜಾರಪ್ಪ ನಾಯ್ಕ, ವೀರಪ್ಪ ಪರವ, ಮಂದಾರತಿ ಎಸ್. ಶೆಟ್ಟಿ, ಮಾಧವ ಶೆಟ್ಟಿಗಾರ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ,ಸಹಾಯಕ ಮುಖ್ಯ ಕಾರ್ಯನಿರ್ವಾ ಹಣಾಧಿಕಾರಿ ಮಲ್ಲಿಕಾ, ಸಿಬಂದಿ ವರ್ಗ ಉಪಸ್ಥಿತರಿದ್ದರು














