ಬಂಟ್ವಾಳ: ಆಶೀರ್ವಾದ್ ಸೇವಾ ಸಂಘ, ಕುಚ್ಚಿಗುಡ್ಡೆ, ತುಂಬೆ ಇದರ ಅಶ್ರಯದಲ್ಲಿ ಸಂಘದ ಸದಸ್ಯರಿಗಾಗಿ ಆಶೀರ್ವಾದ್ ಪ್ರೀಮಿಯರ್ ಲೀಗ್ ಸೀಸನ್ 3 ಕ್ರಿಕೆಟ್ ಪಂದ್ಯಾಟವು ಡಿ. 28ರಂದು ಆದಿತ್ಯವಾರ ತುಂಬೆ ಬೊಳ್ಳಾರಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ವರ್ಷಂಪ್ರತಿ ಸಂಘದ ಸದಸ್ಯರಿಗಾಗಿ ನಡೆಸಿಕೊಂಡು ಬರುತ್ತಿರುವ ಈ ಪಂದ್ಯಾಟದಲ್ಲಿ ತುಂಬೆಯ ಸಂಘ ಸಂಸ್ಥೆಗಳ ಪ್ರಮುಖರ ಉಪಸ್ಥಿತಿಯಲ್ಲಿ ಕ್ರೀಡಾಕೂಟದ
ಉದ್ಘಾಟನಾ ಸಮಾರಂಭ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಘದ ಪ್ರಕಟಣೆ ತಿಳಿಸಿದೆ.















