ಬಂಟ್ವಾಳ :ಭಗವಂತನ ದಾಸರದರೆ ಮಾತ್ರ ಪುಣ್ಯ ಪ್ರಾಪ್ತಿಯಾಗುತ್ತದೆ, ಸಂಪೂರ್ಣ ಸಮರ್ಪಣಭಾವದಿಂದ ಭಗವಂತ ಸ್ಮರಿಸೋಣ, ಧರ್ಮ, ರಾಷ್ಟ್ರ,ಗೋ ,ಸೇವೆ ಯಿಂದ ನಮ್ಮ ಬದುಕನ್ನು ಪಾವನ ಮಾಡೋಣ , ಮಂತ್ರ ಹಾಗೂ ಯಜ್ಞಗಳಿಂದ ಬ್ರಹ್ಮಾಂಡ ರಕ್ಷಣೆಯಾಗುತ್ತಿದೆ, ಅಹಂಕರ,ನಿಂದನೆ ಬಿಟ್ಟು ದೇವರ ಕಾರ್ಯದಲ್ಲಿ ನಮ್ಮೆಲ್ಲರನ್ನು ಸಂಪೂರ್ಣ ತೊಡಗಿಸೋಣ ಎಂದು ಶ್ರೀ ಭಕ್ತಿ ಭೋಷಣ್ ದಾಸ್ ಪ್ರಭುಜೀಯವರು ಮಾರ್ಗದರ್ಶನ ನೀಡಿದರು.
ರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಬ್ರಹ್ಮಗಿರಿ ಗೋವಿನ ತೋಟ ಪುದು ಇಲ್ಲಿ ನಡೆಯುವ ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ, ಮಹಾಯಜ್ಞ ಹಾಗೂ ಗೋ ನವರಾತ್ರಿ ಉತ್ಸವದ ಕಾರ್ಯಾಲಯದ ಉದ್ಘಾಟನೆ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆ ಸಂದರ್ಭದಲ್ಲಿ ಅವರು ಮಾತನಾಡಿದರು.
ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಸಮಿತಿಯ ಅಧ್ಯಕ್ಷರಾದ ಕ್ಯಾಪ್ಟನ್ ಬ್ರಿಜಿಶ್ ಚೌಟ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ,ಭಾರತ ಧರ್ಮಧಾರಿತ ದೇಶವಾಗಿ ಇಂದು ವಿಶ್ವದಲ್ಲಿ ಪ್ರಬಲ ಶಕ್ತಿಯಾಗಿ ಹೋರಹೋಮ್ಮಿದೆ, ಆದ್ದರಿಂದ ನಾವು ಇಂದು ,ವಿಶಿಷ್ಟ ಹಾಗೂ ಶ್ರೇಷ್ಠ ಧರ್ಮದ ಕೆಲಸಕ್ಕೆ ನಮ್ಮನ್ನು
ತೊಡಗಿಸಿಕೊಳ್ಳಬೇಕು, ನಮ್ಮ ಧರ್ಮ ವನ್ನು ಭವಿಷ್ಯಕ್ಕೆ ತಿಳಿಸಿ ಕೂಡುವ ಕಾರ್ಯ ಆಗಬೇಕು, ಧರ್ಮ ಹಾಗೂ ರಾಷ್ಟದ ಕೆಲಸದಲ್ಲಿ ಎಲ್ಲರೂ ಓಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಗೌರವ ಸಲಹೆಗಾರರಾದ ಶೋಭಾ ಮಯ್ಯ,ಗೌರವಧ್ಯಕ್ಷರಾದ ಐತಪ್ಪ ಆಳ್ವ ಸುಜೀರುಗುತ್ತು, ಕಾರ್ಯಧ್ಯಕ್ಷ ವಿಜಯ ಪ್ರಕಾಶ ಮಲ್ಪೆ, ಸಂಘಟನಾ ಕಾರ್ಯದರ್ಶಿಗಳಾದ ಪ್ರಸಾದ್ ಬಿಸಿರೋಡ್, ರತ್ನಕರ ಶೆಟ್ಟಿ ಕಲ್ಲಡ್ಕ,ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ, ಕೋಶಾಧಿಕಾರಿ ವಸಂತಿ ಎಲ್ ಶೆಟ್ಟಿ,ಮಹಿಳಾ ಸಂಚಾಲಕರಾದ ಜಯಶ್ರೀ ಕರ್ಕೇರ, ನ್ಯಾಯವಾದಿ ರಮೇಶ ಉಪಾಧ್ಯಯ ಉಪಸ್ಥಿತರಿದ್ದರು.
ಕಾರ್ಯಧ್ಯಕ್ಷರಾದ ಟಿ ತಾರಾನಾಥ ಕೊಟ್ಟಾರಿ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ಕಾರ್ಯದರ್ಶಿ ನವೀನ್ ಚಾಪೆ ಧನ್ಯವಾದವಿತ್ತರು, ಪ್ರ. ಕಾರ್ಯದರ್ಶಿ ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.















