ಬಂಟ್ವಾಳ ತಾಲೂಕು ಕುಲಾಲ ಸಂಘದಲ್ಲಿ 22ನೇ ವರ್ಷದ ಸಾರ್ವಜನಿಕ ವರಮಹಾಲಕ್ಷ್ಮೀ ವೃತ ಪೂಜೆ.

Coastal Bulletin
ಬಂಟ್ವಾಳ ತಾಲೂಕು ಕುಲಾಲ ಸಂಘದಲ್ಲಿ 22ನೇ ವರ್ಷದ ಸಾರ್ವಜನಿಕ ವರಮಹಾಲಕ್ಷ್ಮೀ ವೃತ ಪೂಜೆ.

ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ 22ನೇ ವರ್ಷದ ಸಾರ್ವಜನಿಕ ವರಮಹಾಲಕ್ಷ್ಮೀ ವೃತ ಪೂಜೆ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಬಿ ಸಿ ರೋಡ್ ರಕ್ತೇಶ್ವರಿ ಸನ್ನಿಧಿಯಲ್ಲಿ ಜರಗಿತು. ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ಘಟಕ , ಸೇವಾದಳ ದ ವತಿಯಿಂದ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಮಿಕ್ಕಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಳದಲ್ಲಿನ ಈ ಶುಭ ಕಾರ್ಯಕ್ರಮದಲ್ಲಿ ಬಾಗವಹಿಸಿ ಶ್ರದ್ದೆಯಿಂದ ಪೂಜೆ ಸಲ್ಲಿಸಿ ಶ್ರೀ ದೇವಿಯ ಅನುಗ್ರಹ ಬೇಡಿಕೊಂಡರು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಸಮಿತಿ ಅಧ್ಯಕ್ಷ ವಿಶ್ವನಾಥ ಬಿ ತಾಲೂಕು ಕುಲಾಲ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಬಂಟ್ವಾಳ, ಕಾರ್ಯದರ್ಶಿ ಕೇಶವ ಮಾಸ್ಟರ್

, ಕೋಶಾಧಿಕಾರಿ ರಮೇಶ್ ಸಾಲಿಯಾನ್ , ಮಹಿಳಾ ಘಟಕ ಅಧ್ಯಕ್ಷೆ ಮಾಲತಿ ಮಚೇಂದ್ರ ಮತ್ತು ಸಮಿತಿಯ ಸದಸ್ಯರು , ನೂರಾರು ಹಿತೈಷಿಗಳು ಉಪಸ್ಥಿತರಿದ್ದು ಸಹಕರಿಸಿದರು.

Leave a Comment