ಬಂಟ್ವಾಳ :ಫರಂಗಿಪೇಟೆ ಕುಲಾಲ ಸುಧಾರಕ ಸಂಘದ ನಾಣ್ಯ ಪುದು, ಇದರ ಆಶ್ರಯದಲ್ಲಿ 19ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆಯು ಕುಲಾಲ ಸಮುದಾಯ ಭವನದಲ್ಲಿ ಅ 25ರಂದು ಶುಕ್ರವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ 6.00ರಿಂದ ಗಣಪತಿ ಹೋಮ. ಮಧ್ಯಾಹ್ನ 3.30ರಿಂದ 5.30ರವರೆಗೆ ಭಜನೆ. ಸಂಜೆ 7.00ಗಂಟೆಗೆ ಮಹಾಪೂಜೆ ನಂತರ ಅನ್ನಪ್ರಸಾದ ನಡೆಯಿತು.ಈ ಸಂದರ್ಭದಲ್ಲಿ ಕುಲಾಲ ಸಂಘದ ಅಧ್ಯಕ್ಷರಾದ ನಾರಾಯಣ, ಕಾರ್ಯದರ್ಶಿ ವಿಶ್ವನಾಥ ಕುಲಾಲ್ ಸಹಿತ ಸರ್ವಸದಸ್ಯರು ಹಾಗೂ
ಮಹಿಳಾ ಘಟಕದ ಉಪಾಧ್ಯಕ್ಷೆ ಕುಸುಮಾನಂದ. ಕಾರ್ಯದರ್ಶಿ ಮೀನಾಕ್ಷಿ ಜಯರಾಮ. ಉಮಾಚಂದ್ರಶೇಖರ್.ಕಮಲ ರಮೇಶ್.ಉಮಾ ಲಿಂಗಪ್ಪ ಕೋಡಿ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಶುಭ ಕಾರ್ಯಕ್ರಮದಲ್ಲಿ ಬಾಗವಹಿಸಿ ಶ್ರದ್ದೆಯಿಂದ ಪೂಜೆ ಸಲ್ಲಿಸಿ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾದರು















