ಬಂಟ್ವಾಳ :ಡ್ರಗ್ ಎನ್ನುವುದು ಅನಾರೋಗ್ಯ ಪೀಡಿತರಿಗೆ ಅವಶ್ಯಕವಾದರೂ ಅವುಗಳನ್ನು ವೈದ್ಯಕೀಯ ಸಲಹೆಯ ಮೇರೆಗೆ ನಾವು ಬಳಕೆ ಮಾಡಬೇಕಾಗುತ್ತದೆ. ಅದರಲ್ಲೂ ಗಾಂಜಾ, ಮದ್ಯದಂತಹ ಮಾದಕ ದ್ರವ್ಯಗಳನ್ನು ಸೇವಿಸುವುದು ಯುವ ಜನತೆಗೆ ಹೇಳಿದ್ದಲ್ಲ. ಡ್ರಗ್ ಪಡ್ಲರ್ ಗಳಾಗಲಿ,ಅಥವಾ ಹಾನಿಕಾರಕ ಮಾದಕ ದ್ರವ್ಯಗಳನ್ನು ಮಾರಾಟ ಮಾಡುವುದಾಗಲಿ ಕಾನೂನು ಬಾಹಿರವಾಗಿರುತ್ತದೆ. ವಿದ್ಯಾರ್ಥಿ ಮತ್ತು ಯುವ ಜನಾಂಗ ಡ್ರಗ್ ಬಳಕೆಯಿಂದ ಉಂಟಾಗುವ ಹಾನಿಕಾರಕ ಅಂಶಗಳನ್ನು ಅರಿತುಕೊಂಡು ಅರಿವು ಮೂಡಿಸಿಕೊಳ್ಳಬೇಕಾಗಿದೆ ” The evidence is clear : Invest in Prevention “ ಎಂಬ ಥೀಮ್ ನ್ನು ನಾವು ಪಾಲಿಸಬೇಕಾಗಿದೆ ಎಂಬುದಾಗಿ ದಕ್ಷಿಣ ಕನ್ನಡದ CEN ಪೋಲೀಸ್ ಠಾಣೆಯ ಡಿ ವೈ ಎಸ್ ಪಿ ಮಂಜುನಾಥ್ ಆರ್. ಜಿ. ಹೇಳಿದರು.
ಅವರು ಮಾತನಾಡಿ ಅವರು ತುಂಬೆ ಪದವಿ-ಪೂರ್ವ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ಇಲಾಖೆ ಆಯೋಜಿಸಿದ್ದ ಮಾದಕ ದ್ರವ್ಯ ಸೇವನೆ ಮತ್ತು ಅದರ ದುಷ್ಟರಿಣಾಮದ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಜ್ಞಾ ಬೋಧನೆ ಮಾಡಿ ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತುಂಬೆ ಕಾಲೇಜಿನ ಪ್ರಾಂಶುಪಾಲ ವಿ.ಸುಬ್ರಹ್ಮಣ್ಯ ಭಟ್ ಮಾತನಾಡಿ, ಸ್ನೇಹಿರೊಂದಿಗೆ ಕೂಡಿ, ಫ್ಯಾಶನ್ ಗಾಗಿ ಅಥವಾ ಇನ್ನಾವುದೋ ದುಃಖ–ಸಂತೋಷದ ಸಂದರ್ಭದಲ್ಲಿ ಪ್ರಾರಂಭವಾಗುವ ಮಾದಕ
ದ್ರವ್ಯ ಸೇವನೆ ಮುಂದೆ ವ್ಯಸನ ದತ್ತ ಕೊಂಡೊಯುತ್ತದೆ. ಡ್ರಗ್ ವ್ಯಸನಿಯಾದ ಬಳಿಕ ವ್ಯಕ್ತಿ ತನ್ನ ಹಣ, ಅರೋಗ್ಯ ಸ್ಥಾನ ಮಾನವನ್ನೆಲ್ಲ ಕಳೆದುಕೊಳ್ಲಬೇಕಾಗುತ್ತದೆ.ಅದರ ಮೊದಲೇ ಎಚ್ಚತ್ತುಕೊಳ್ಳಬೇಕಾದ ಅನಿವಾರ್ಯತೆ ಇಂದಿನ ಯುವ ಜನಾಂಗ ಅರಿತುಕೊಳ್ಳಬೇಕಾಗಿದೆ ಎಂದರು.
ಹೆಡ್ ಕಾನ್ಸ್ ಟೇಬಲ್ ಅಜಿತ್, ಕಾನ್ಸ್ ಟೇಬಲ್ ಪುನೀತ್ ಮತ್ತಿರರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸಕ ದಿನೇಶ್ ಶೆಟ್ಟಿ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಮ್ ಜೆ.ನಾಯಕ್.ಕೆ. ವಂದಿಸಿ ನಿರೂಪಿದರು.









