ತಲೆಂಬಿಲ: ಮಾ.28, ಯುವಕೇಸರಿ ಗೆಳೆಯರ ಬಳಗದ 12ನೇ ವಾರ್ಷಿಕೋತ್ಸವ ಸಮಾರಂಭ.

Coastal Bulletin
ತಲೆಂಬಿಲ: ಮಾ.28, ಯುವಕೇಸರಿ ಗೆಳೆಯರ ಬಳಗದ 12ನೇ ವಾರ್ಷಿಕೋತ್ಸವ ಸಮಾರಂಭ.

ಬಂಟ್ವಾಳ :ಯುವಕೇಸರಿ ಗೆಳೆಯರ ಬಳಗ ತಲೆಂಬಿಲ, ಅಮ್ಟಾಡಿ ಇದರ 12ನೇ ವಾರ್ಷಿಕೋತ್ಸವ ಸಮಾರಂಭ ಮಾ.28ರಂದು ಶನಿವಾರ ಮನೆಜಾಲು ಎಂಬಲ್ಲಿ ವಿಜೃಂಭಣೆಯಿಂದ ನಡೆಯಲಿದೆ.


ಅಂದು ಸಂಜೆ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ವಾರ್ಷಿಕೋತ್ಸವದ ಸಭಾ ಸಮಾರಂಭ ನಡೆಯಲಿದ್ದು, ಪುದು ರಾಧಾ ಸುರಭಿ ಗೋ ಮಂದಿರದ ಭಕ್ತಿಭೂಷಣ್ ದಾಸ್  ಪ್ರಭುಜೀ ಆಶೀರ್ವಾಚನ ನೀಡಲಿದ್ದಾರೆ. ಸಂಸದ

ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಸಹಿತ ಅನೇಕ ಗಣ್ಯರು ಉಪಸ್ಥಿತರಿರುವರು.

ಬಳಿಕ ನಮ್ಮ ಕಲಾವಿದೆರ್ ಬೆದ್ರ ಇವರಿಂದ ವೈರಲ್ ವೈಶಾಲಿ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.


Leave a Comment