ಬಂಟ್ವಾಳ: ಕೊಡ್ಮಾಣ್ ಶ್ರೀ ಕೋರ್ದಬ್ಬು ದೈವಸ್ಥಾನ ಇಲ್ಲಿ ಶ್ರೀ ಕೋರ್ದಬ್ಬು ತನ್ನಿಮಾನಿಗ ಮತ್ತು ಸಪರಿವಾರ ದೈವಗಳ ವರ್ಷಾವಧಿ ನೇಮೋತ್ಸವವು ಮಾ.1ಶನಿವಾರ ಹಾಗೂ ಮಾ 2 ಆದಿತ್ಯವಾರ ನಡೆಯಲಿದೆ.
ಮಾ. 1ರಂದು ಶನಿವಾರ ಬೆಳಿಗ್ಗೆ 9.00ಕ್ಕೆ : ಶ್ರೀ ಕೋರಬ್ಬು ತನ್ನಿಮಾನಿಗ ಮತ್ತು ಸಪರಿವಾರ ದೈವಗಳ ಭಂಡಾರ ಏರುವುದು,ಬೆಳಿಗ್ಗೆ 10.00ರಿಂದ : ಗಣಹೋಮ, ಕಲಶಾಭೀಷೇಕ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ.ರಾತ್ರಿ 10.00ರಿಂದ: ಶ್ರೀ ಕೋರ್ದಬ್ಬು ತನ್ನಿಮಾನಿಗ
ದೈವಗಳ ನೇಮೋತ್ಸವ ನಡೆಯಲಿದೆ.
ಮಾ. 2ರಂದು ಆದಿತ್ಯವಾರ ಸಂಜೆ 3.30ರಿಂದ ಚಾಮುಂಡಿ ಗುಳಿಗ ದೈವಗಳ ಗಗ್ಗರ ಸೇವೆ,ರಾತ್ರಿ 7.30ರಿಂದ ಪಂಜುರ್ಲಿ ಗುಳಿಗ ದೈವಗಳ ಗಗ್ಗರ ಸೇವೆ,ರಾತ್ರಿ 1.00ರಿಂದ ರಾಹುಗುಳಿಗ ದೈವದ ಗಗ್ಗರ ಸೇವೆ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.














