ಬಂಟ್ವಾಳ:ಲಯನ್ಸ್ ಕ್ಲಬ್ ಗೆ ಪ್ರಾಂತ್ಯಾದ್ಯಕ್ಷ ಲಯನ್ ಯೂಜಿನ್ ಲೋಬೋ ಅಧಿಕೃತ ಭೇಟಿ.

Coastal Bulletin
ಬಂಟ್ವಾಳ:ಲಯನ್ಸ್ ಕ್ಲಬ್ ಗೆ ಪ್ರಾಂತ್ಯಾದ್ಯಕ್ಷ ಲಯನ್ ಯೂಜಿನ್ ಲೋಬೋ ಅಧಿಕೃತ ಭೇಟಿ.

ಬಂಟ್ವಾಳ :ಲಯನ್ಸ್ ಕ್ಲಬ್ ಬಂಟ್ವಾಳಕ್ಕೆ ಲಯನ್ಸ್ ಜಿಲ್ಲೆಯ ಪ್ರಾಂತ್ಯ ||| ರ ಪ್ರಾಂತ್ಯಾದ್ಯಕ್ಷ ರಾದ ಲಯನ್ ಯೂಜಿನ್ ಲೋಬೋ ರವರ ಅಧಿಕೃತ ಭೇಟಿ ಕಾರ್ಯಕ್ರಮವು ಲಯನ್ಸ್ ಸೇವಾ ಮಂದಿರದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಆರಂಭದಲ್ಲಿ ಲಯನ್ಸ್ ಜಿಲ್ಲಾ ಸಂಯೋಜಕರಾದ ತರಬೇತುದಾರರಾದ ಲಯನ್ ವಿಜಯ ವಿಷ್ಣು ಮಯ್ಯ ರವರು ಕ್ಲಬ್ ಓರಿಯೆಂಟೇಷನ್ ಕಾರ್ಯಾಗಾರ ನಡೆಸಿಕೊಟ್ಟರು. ಪ್ರಾಂತ್ಯದ ಬೇರೆ ಬೇರೆ ಕ್ಲಬ್ ಗಳ ಅಧ್ಯಕ್ಷರುಗಳು, ಸದಸ್ಯರುಗಳು ಉಪಸ್ಥಿತರಿದ್ದರು. 

ಸಭಾ ಕಾರ್ಯಕ್ರಮದಲ್ಲಿ ಸೇವಾ ಕಾರ್ಯಕ್ರಮವಾಗಿ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲಾಯಿತು. ಪ್ರಾಂತ್ಯ ಅಧ್ಯಕ್ಷರು ಮಾತನಾಡುತ್ತಾ ಸೇವೆಯ ಮೂಲಕ ಸಂತೃಪ್ತಿಯನ್ನು ಕಾಣಬಹುದು. ದುಡಿಮೆಯಲ್ಲಿ ಸ್ವಲ್ಪ ಹಣವನ್ನು ಕಷ್ಟದಲ್ಲಿರುವವರಿಗೆ ನೀಡಿದಾಗ ವ್ಯಕ್ತಿತ್ವಕ್ಕೂ ಶೋಭೆ, ಸಂಸ್ಥೆಗೂ ಘನತೆ ಎಂಬ ಮಾತನ್ನು ಹೇಳಿದರು. ಎಲ್ಲರ ಉಪಸ್ಥಿತಿಯಲ್ಲಿ

ಪ್ರಾಂತ್ಯದ್ಯಕ್ಷರನ್ನು ಕ್ಲಬ್ ವತಿಯಿಂದ ಗೌರವಿಸಲಾಯಿತು. 

ಕಾರ್ಯಕ್ರಮದ ಆತಿಥ್ಯ ನೀಡಿದ ಲಯನ್ ಕೃಷ್ಣ ಶ್ಯಾಮ್, ಸತ್ಯನಾರಾಯಣ ರಾವ್, ದುರ್ಗಾಪರಮೇಶ್ವರ ಭಟ್ ರವರಿಗೆ ಗೌರವಿಸಲಾಯಿತು.ಪ್ರಾಂತ್ಯದ ರಾಯಭಾರಿ ಕೃಷ್ಣ ಶ್ಯಾಮ್ , ವಲಯಾಧ್ಯಕ್ಷ ಉಮೇಶ್ ಪಿ ,ಪ್ರಾಂತ್ಯದ ವಿವಿಧ ಕ್ಲಬ್ ಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು, ಲಯನ್ಸ್ ಕ್ಲಬ್ ಬಂಟ್ವಾಳದ ಕಾರ್ಯದರ್ಶಿ ದೇವಿಕಾ ದಾಮೋದರ್ , ಕೋಶಾಧಿಕಾರಿ ದೇವಪ್ಪ ಪೂಜಾರಿ , ಲಿಯೋ ಅಧ್ಯಕ್ಷೆ ಖುಷಿ ಟಿ ಶೆಟ್ಟಿ , ಕ್ಲಬ್ ನ ಸದಸ್ಯರುಗಳು ಮುಂತಾದವರು ಉಪಸ್ಥಿತರಿದ್ದರು.

Leave a Comment