ಕಲ್ಲಡ್ಕ :ಸರಕಾರಿ ಶಾಲೆಗೆ ನೂತನ ಧ್ವಜಸ್ಥಂಭ ಹಾಗೂ 4 ಸ್ಮಾರ್ಟ್ ಟಿವಿ ಕೊಡುಗೆ.

Coastal Bulletin
ಕಲ್ಲಡ್ಕ :ಸರಕಾರಿ ಶಾಲೆಗೆ ನೂತನ ಧ್ವಜಸ್ಥಂಭ ಹಾಗೂ 4 ಸ್ಮಾರ್ಟ್ ಟಿವಿ ಕೊಡುಗೆ.

ಬಂಟ್ವಾಳ : ಕಲ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇಶದ 77ನೇ ಗಣರಾಜ್ಯೋತ್ಸವ ಸೋಮವಾರ ಆಚರಿಸಲಾಯಿತು. ಇದೇ ವೇಳೆ ಪಂಡಿತ್ ಉಗ್ಗಪ್ಪ ಶೆಟ್ಟಿ ಅವರ ಸ್ಮರಣಾರ್ಥ ಅವರ ಮಗ ಗಣೇಶ್ ಶೆಟ್ಟಿ ಅವರು ಕೊಡುಗೆಯಾಗಿ ನಿರ್ಮಿಸಿದ ನೂತನ ಧ್ವಜಸ್ಥಂಭ ಹಾಗೂ ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ 4 ಸ್ಮಾರ್ಟ್ ಟಿವಿಗಳನ್ನು ಕೊಡುಗೆಯಾಗಿ ನೀಡಿದರು.


ಶಾಲಾ ಹಿರಿಯ ವಿದ್ಯಾರ್ಥಿ, ಮಾಜಿ ಶಾಸಕ ರುಕ್ಮಯ ಪೂಜಾರಿ ಅವರು ನೂತನ ಧ್ವಜ ಸ್ಥಂಭ ಉದ್ಘಾಟಿಸಿದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮಧುಸೂಧನ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ ಪಂ ಮಾಜಿ ಅಧ್ಯಕ್ಷ ಕೆ ಪದ್ಮನಾಭ ರೈ, ಮಾಜಿ ಸದಸ್ಯೆ ಶ್ರೀಮತಿ ಐಡಾ ಸುರೇಶ್, ಶಾಲಾ ಹಿರಿಯ ವಿದ್ಯಾರ್ಥಿ, ಹೋಟೆಲ್ ಮಾಲಕ ಶಿವರಾಮ ಹೊಳ್ಳ,

ಪ್ರಮುಖರಾದ ಅಬೂಬಕ್ಕರ್, ರಾಮಣ್ಣ ಭಾಗವಹಿಸಿದ್ದರು. 

 ಇದೇ ವೇಳೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ವಿದ್ಯಾರ್ಥಿಗಳಿಂದ ಅಣಕು ಸಂಸತ್ತು ಕಾರ್ಯಕ್ರಮ ನಡೆಯಿತು. ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಚಂದನಾ ಜೈನ್ ಸಹಿತ ಸದಸ್ಯರು ಉಪಸ್ಥಿತರಿದ್ದರು. ಶ್ರೀಮತಿ ಸವಿತಾ ಭಟ್ ಹಾಗೂ ಶ್ರೀಮತಿ ಲೋಲಾಕ್ಷಿ ಅವರು ಬಹುಮಾನ ವಿತರಣೆ ನಿರ್ವಹಿಸಿದರು. ಶಾಲಾ ಮುಖ್ಯ ಶಿಕ್ಷಕ ಅಬೂಬಕ್ಕರ್ ಅಶ್ರಫ್ ಸ್ವಾಗತಿಸಿದರು. ಶ್ರೀಮತಿ ಸೌಮ್ಯಲತಾ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Comment