ಬಂಟ್ವಾಳ :ಕುಲಾಲ ಯುವ ವೇದಿಕೆಯ ಅಶ್ರಯದಲ್ಲಿ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಬಿ.ಸಿ ರೋಡ್ ಇದರ ವ್ಯವಸ್ಥಾಪನ ಸಮಿತಿಯ 3 ವರ್ಷದ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಯುವ ವೇದಿಕೆಯ ಸಲಹೆಗಾರರಾದ ಬಿ. ಮೋಹನ್ ರವರನ್ನು ಅವರ ಸ್ವಗೃಹದಲ್ಲಿ ಗೌರವಿಸಿ ಅಭಿನಂದಿಸಿ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಿ. ಮೋಹನ್, ಒಂದು ಕಾಲದಲ್ಲಿ ದೇವರ ಚಾಕಿರಿ ಮಾಡಲು ಮಾತ್ರ ಸೀಮಿತವಾಗಿದ್ದ ಸಮುದಾಯದ ನನಗೆ ಆಡಳಿತ ಮಾಡಲು ಅವಕಾಶ ಒದಗಿರುವುದು ಸುಯೋಗ.ಆರೋಗ್ಯವನ್ನು ದೇವಿ ಕರುಣಿಸಿದರೆ ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ಮಾಡುವುದಾಗಿ ಮನದಿಂಗಿತ ವ್ಯಕ್ತಪಡಿಸಿ,
ಯುವ ವೇದಿಕೆ ಈ ಹಿಂದೆಯೂ ಶ್ರೀ ದೇವಿ ಸನ್ನಿಧಿಯ ಎಲ್ಲಾ ಕಾರ್ಯ ಗಳಲ್ಲೂ ಸೇವೆ ಮಾಡಿದ್ದು ಇನ್ನೂ ಮುಂದೆಯೂ ಸೇವೆ ಮಾಡಲು ಶ್ರೀ ದೇವಿಯ ಅನುಗ್ರಹವಿರಲಿ ಮತ್ತು ಯುವ ವೇದಿಕೆಯು ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿ ಎಂದು ಹಾರೈಸಿದರು.















