ಬಿ ಸಿ ರೋಡ್ :ಮಾ.1ರಂದು ಸೇವಾ ಜಾಗರಣ ಆಶ್ರಯದಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ.

Coastal Bulletin
ಬಿ ಸಿ ರೋಡ್ :ಮಾ.1ರಂದು ಸೇವಾ ಜಾಗರಣ ಆಶ್ರಯದಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ.

ಬಂಟ್ವಾಳ:ಸೇವಾ ಜಾಗರಣ ಇದರ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಹಾಗೂ ಎ.ಜೆ.ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ನೇತ್ರ, ದಂತ ಮತ್ತು ಆರೋಗ್ಯ ತಪಾಸಣಾ ಶಿಬಿರ ಮಾ.01ನೇ ಆದಿತ್ಯವಾರ ಬೆಳಿಗ್ಗೆ 9.00ರಿಂದ ಬಿ.ಸಿ.ರೋಡ್‌ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ.

ಈ ಶಿಬಿರದಲ್ಲಿ ಅವಶ್ಯಕತೆ ಇದ್ದವರಿಗೆ ಉಚಿತವಾಗಿ ಕನ್ನಡಕ ವಿತರಣೆ ಮಾಡಲಾಗುವುದು.

ಈ ಸಂದರ್ಭದಲ್ಲಿ ಪ್ರಿಯಾ೦ಶು ಅಸೋಸಿಯೇಟ್ಸ್ ಇವರ ವತಿಯಿಂದ ರಿಯಾಯತಿ ದರದಲ್ಲಿ ಅಪಘಾತ ವಿಮೆ ಹಾಗೂ ಆರೋಗ್ಯ

ವಿಮೆ ಮತ್ತು ಮಾಹಿತಿ ಕಾರ್ಯಗಾರ, ಸಿ.ಪಿ.ಓ.ವಿಜಯನ್ (ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ)ಇವರಿಂದ ಸೈನ್ಯಕ್ಕೆ ಸೇರುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.



Leave a Comment