ಬಂಟ್ವಾಳ :ಶ್ರೀ ಲಕ್ಷ್ಮೀ ವಿಷ್ಣು ಸೇವಾ ಸಂಘ (ರಿ) ಜಾರಂದಗುಡ್ಡೆ ಇದರ ವಾರ್ಷಿಕ ಮಹಾಸಭೆಯು ಫೆ. 23ರಂದು ಆದಿತ್ಯವಾರ ನಡೆದು 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ಕಂಜತ್ತೂರು ಅವಿರೋಧವಾಗಿ ಆಯ್ಕೆಯಾದರು.
ಇತರ ಪದಾಧಿಕಾರಿಗಳ ವಿವರ :
ಸಂಚಾಲಕ ಮೋಹನ್ ಜಾರಂದಗುಡ್ಡೆ,ಉಪಾಧ್ಯಕ್ಷ ಕಿಶೋರ್ ಜಾರಂದಗುಡ್ಡೆ,ಪ್ರ. ಕಾರ್ಯದರ್ಶಿ ನಾಗರಾಜ್ ಆಯರಗುಡ್ಡೆ , ಕೋಶಾಧಿಕಾರಿ
ಜಯರಾಮ್ ಜಾರಂದಗುಡ್ಡೆ, ಕ್ರೀಡಾ ಕಾರ್ಯದರ್ಶಿ ಭರತ ಜಾರಂದಗುಡ್ಡೆ, ಲೋಹಿತ್ ಕಂಜತ್ತೂರು, ಜೊತೆ ಕಾರ್ಯದರ್ಶಿ ರಾಜೇಶ್ ಜಾರಂದಗುಡ್ಡೆ, ಯತೀಶ್ ಜಾರಂದಗುಡ್ಡೆ ಸರ್ವಾನುಮತದಿಂದ ಆಯ್ಕೆಯಾದರು.














