ಬಂಟ್ವಾಳ :ತುಂಬೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಫೆ.25ರಂದು ವಿಶೇಷ ಚೇತನರ ಗ್ರಾಮ ಸಭೆ ನಡೆಯಿತು . ಈ ಕಾರ್ಯಕ್ರಮದಲ್ಲಿ ವಿಶೇಷ ಚೇತನರ 11 ಫಲಾನುಭವಿಗಳಿಗೆ ವೈದ್ಯಕೀಯ ವೆಚ್ಚ ಹಾಗೂ ಶಿಕ್ಷಣ ವೆಚ್ಚಕ್ಕೆ ಪಂಚಾಯತ್ ವತಿಯಿಂದ ಚೆಕ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಜಯಂತಿ ಕೇಶವ,ಉಪಧ್ಯಾಕ್ಷರಾದ ಗಣೇಶ್ ಸಾಲಿಯಾನ್ ನಿಕಟ ಪೂರ್ವ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ, ಇಬ್ರಾಹಿಂ, ಅಬ್ದುಲ್ ಅಝೀಝ್, ಕೀಶೂರ್, ಅರುಣ್ ಕುಮಾರ್,ಮಹಮ್ಮದ್ ಝಹೂರ್.ಜಯಂತಿ
ನಾಗೇಶ್ ಹೇಮಲತಾ ಜಿ ಪೂಜಾರಿ, ಆತಿಕಾಬಾನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವುಲಾಲ್ ಚವ್ಹಾನ್ ಲೆಕ್ಕ ಸಹಾಯಕರಾದ ಚಂದ್ರಕಲಾ ಜಿ. ಗ್ರಾಮೀಣ ಪುನರ್ ವಸತಿ ಕಾರ್ಯಕರ್ತ ಶಮೀರ್ ಮತ್ತಿತರರು ಉಪಸ್ಥಿತರಿದರು.














