Coastal Bulletin

ಮಂಗಳೂರು :ಆಲ್ ಇಂಡಿಯಾ ನೀಟ್ ಪಿಜಿ ಪರೀಕ್ಷೆಯ ಎರಡು ವಿಷಯದಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದು ಕರ್ನಾಟಕದ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ಮಿಂಚುವಂತೆ ಮಾಡಿದ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಡಾ.ಚಿದಾನಂದ ಕುಂಬಾರ ಬೆಳಗಲಿ ಇವರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ, IMA ಹಾಲ್ ಮಂಗಳೂರು (ವೆನ್ಲೋಕ್ ಆಸ್ಪತ್ರೆ ಬಳಿ) ಜರುಗಿತು

ಡಾ. ಚಿದಾನಂದ ಕುಂಬಾರ ಬೆಳಗಲಿ ಹುಬ್ಬಳ್ಳಿ ಕಿಮ್ಸ್​ನಲ್ಲಿ ಎಮ್​ಬಿಬಿಎಸ್​ (MBBS) ಮುಗಿಸಿದ್ದರು. ಒಂದು ವರ್ಷದ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಯ ಏಮ್ಸ್​ನಲ್ಲಿ ಎಂಡಿ ಮೆಡಿಸಿನ್ ಮುಗಿಸಿದ್ದಾರೆ. ಸೂಪರ್​ ಸ್ಪೆಷಾಲಿಟಿ ನೀಟ್ ಪರೀಕ್ಷೆಯಲ್ಲಿ ಚಿದಾನಂದ ಬೆಳಗಲಿ  gastro ಹಾಗೂ hepato ವಿಭಾಗಗಳಲ್ಲಿ ದೇಶಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ನಿಟ್ಟಿನಲ್ಲಿ ಕರ್ನಾಟಕ ಕುಂಬಾ ವೈದ್ಯರ ಕೂಟ - ಮಂಗಳೂರು . ಇವರ ಜೊತೆ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇಧಿಕೆ, ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ ದ ಕರಾವಳಿ ವಿಬಾಗ ಕುಂಬಾರ ರಾಜ್ಯ ನಾಯಕರುಗಳು, ಭಾರತೀಯ ವೈದ್ಯಕೀಯ ಸಂಘದ ಮಂಗಳೂರಿನ ಹಾಗೂ ರಾಜ್ಯ ಪದಾಧಿಕಾರಿಗಳು ಭಾಗವಹಿಸಿ ಶುಭಕೋರಿದರು.

Leave a Comment