Coastal Bulletin

ಬಂಟ್ವಾಳ :ಪ್ಲೈ ಓವರ್ ನಿರ್ಮಾಣದ ಬಳಿಕ ಬಿಸಿರೋಡಿನ ಪೇಟೆಯ ಸೌಂದರ್ಯ ಸಂಪೂರ್ಣ ‌ಹದಗೆಟ್ಟಿತ್ತು. ಪಾದಚಾರಿಗಳಿಗೆ ನಡೆದಾಡಲು ಅವಕಾಶ ಇಲ್ಲದ ರೀತಿಯಲ್ಲಿ ಕೆಸರು ದೂಳಿನಿಂದ ತುಂಬಿತ್ತು. ಬಸ್ ನಿಂದ ಇಳಿಯುವಾಗ ಹೊಂಡಗುಂಡಿಗಳಿಂದ ತುಂಬಿದ್ದ ಬಿಸಿರೋಡಿನ ಪೇಟೆಗೆ ಕಾಯಕಲ್ಪ ಒದಗಿಸುವ ‌ಕೆಲಸ ನಡೆಯುತ್ತಿದೆ.

ಹೊಂಡ ಗುಂಡಿಗಳಿಂದ ತುಂಬಿದ್ದ,ಬಿಸಿರೋಡಿನ ಸೌಂದರ್ಯ ಕೆಡಿಸಿದ್ದ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಿಗೆ ಶಾಸಕ ರಾಜೇಶ್ ನಾಯ್ಕ್ ಅವರ ವಿಶೇಷ ಪ್ರಯತ್ನದ ‌ಮೂಲಕ ಡಾಮರೀಕರಣ ಕಾಮಗಾರಿ ನಡೆಯುತ್ತಿದೆ.

“ಸುಂದರ ಬಿಸಿರೋಡಿನ ” ಕಲ್ಪನೆಯ ಮೂಲಕ ಬಿಸಿರೋಡಿನ ಪೇಟೆಯ ಅಭಿವೃದ್ಧಿ ಗೆ ಮುಂದಾದ ಶಾಸಕರು ಪ್ಲೈ ಓವರ್ ಕೆಳಗಡೆ ಹಾಗೂ ರಿಕ್ಷಾ ಪಾರ್ಕ್ ಮಾಡುವ ಜಾಗಕ್ಕೆ ಇಂಟರ್

ಲಾಕ್ ಅಳವಡಿಸಿದ್ದಾರೆ.

ಅ ಬಳಿಕ ಪ್ಲೈ ಓವರ್ ಗೆ ಸುಣ್ಣಬಣ್ಣ ಬಳಿದು ಪಿಲ್ಲರ್ ಗಳಲ್ಲಿ ಕರಾವಳಿ ಭಾಗದ ಸಂಸ್ಕೃತಿಗಳನ್ನು ಬಿಂಬಿಸುವ ಕಂಬಳ,ಕೋಳಿ ಅಂಕ ,ಜಾತ್ರೆ, ಕೃಷಿ ಹೀಗೆ ಅನೇಕ ಚಿತ್ರಗಳನ್ನು ಬಿಡಿಸಲಾಗಿದೆ.

ಇದೀಗ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯ ಇಕ್ಕೆಲಗಳಿಗೆ ಡಾಮರೀಕರಣ ವನ್ನು ಮಾಡಲಗುತ್ತಿದೆ. ಸುಂದರ ಬಿಸಿರೋಡಿನ ಕಾಮಗಾರಿ ಪೂರ್ಣ ಹಂತ ತಲುಪುತ್ತಿದೆ.


Leave a Comment