ಫರಂಗಿಪೇಟೆ: ಜೂ 30ರಂದು ಸೇವಾಂಜಲಿ ಪ್ರತಿಷ್ಠಾನದ ಅಶ್ರಯದಲ್ಲಿ 128ನೇ ರಕ್ತದಾನ ಶಿಬಿರ.

Coastal Bulletin
ಫರಂಗಿಪೇಟೆ: ಜೂ 30ರಂದು ಸೇವಾಂಜಲಿ ಪ್ರತಿಷ್ಠಾನದ ಅಶ್ರಯದಲ್ಲಿ 128ನೇ ರಕ್ತದಾನ ಶಿಬಿರ.

ಬಂಟ್ವಾಳ :ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಇವರ ಆಶ್ರಯದಲ್ಲಿ ಇಂಡಿಯನ್ ರೆಡ್‌ ಕ್ರಾಸ್ ಸೊಸೈಟಿ, ದ. ಕ. ಜಿಲ್ಲೆ ಇವರ ಸಹಯೋಗ ದೊಂದಿಗೆ 128ನೇ ರಕ್ತದಾನ ಶಿಬಿರವು ಜೂ.30ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 9-00ರಿಂದ 1-00ರ ವರೆಗೆ ಫರಂಗಿಪೇಟೆ ಸೇವಾಂಜಲಿ ಸಭಾಗೃಹದಲ್ಲಿ ನಡೆಯಲಿದೆ.

ಅತಿಥಿಗಳಾಗಿ ಕೆ. ಮೋಹನ್ ಶೆಟ್ಟಿ ಕೋಶಾಧಿಕಾರಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ದ. ಕ.ಜಿಲ್ಲೆ, ಹಾಗೂ ಎನ್. ಪ್ರಕಾಶ್ ಕಾರಂತ, ಮಾಜಿ

ಗವರ್ನರ್, ರೋಟರಿ ಕ್ಲಬ್ ಜಿಲ್ಲೆ ಇವರು ಉಪಸ್ಥಿತರಿರುವರು ಎಂದು ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment