ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ-ಧಾರ್ಮಿಕಸಭೆ. ಆಕರ್ಷಣೆಯ ಬದುಕಿಗಿಂತ ಆದರ್ಶದ ಬದುಕಿಗೆ ಧಾರ್ಮಿಕ ಶ್ರದ್ಧಾಕೇಂದ್ರಗಳು ಅಗತ್ಯ :ಒಡಿಯೂರು ಶ್ರೀ.

Coastal Bulletin
ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ-ಧಾರ್ಮಿಕಸಭೆ. ಆಕರ್ಷಣೆಯ ಬದುಕಿಗಿಂತ ಆದರ್ಶದ ಬದುಕಿಗೆ ಧಾರ್ಮಿಕ ಶ್ರದ್ಧಾಕೇಂದ್ರಗಳು ಅಗತ್ಯ :ಒಡಿಯೂರು ಶ್ರೀ.

ಕುಲಶೇಖರ : ಬದುಕು ಹರಿಯುವ ನೀರು ಇದ್ದಂತೆ. ಅದಕ್ಕೆ ಧರ್ಮದ ಧಾರೆಯೆರೆದಾಗ ಬದುಕು ಸುಂದರವಾಗುತ್ತದೆ. ಧರ್ಮದ ಅನುಷ್ಠಾನದಿಂದ ಬದುಕು ಸಾರ್ಥಕತೆ ಆಗುತ್ತದೆ. ಮೂಲ್ಯರು ಅಮೂಲ್ಯರು. ಮಧುರತೆ, ಪ್ರೀತಿ, ಸರಳತೆ, ಒಳ್ಳೆಯ ಗುಣ ಕುಲಾಲ ಸಮುದಾಯದ ಜನತೆಯಲ್ಲಿದೆ. ಅದು ಅವರಿಗೆ ಮಣ್ಣಿನ ಗುಣದಿಂದ ಬಂದಿದೆ. ಭಕ್ತಿ ಮತ್ತು ಪ್ರೀತಿ ಇಲ್ಲಿ ಒಟ್ಟಾಗಿ ಕಾಣುತ್ತಿದ್ದು, ಇಷ್ಟೊಂದು ಅಂದದ ದೇವಾಲಯ ಎದ್ದು ನಿಲ್ಲಲು ಉತ್ತಮರಿಂದ ಮಾತ್ರ ಸಾಧ್ಯ ಆಗಿದೆ ಎಂದು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

ಅವರು ಮೇ ೧೪ರಿಂದ ಮೊದಲ್ಗೊಂಡು ೨೫ರವರೆಗೆ ಜರಗುತ್ತಿರುವ ಇತಿಹಾಸ ಪ್ರಸಿದ್ಧ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಂಗಳವಾರ ಸಂಜೆ ಜರಗಿದ ಧಾರ್ಮಿಕಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಎ. ಮೂಲ್ಯ ಅಧ್ಯಕ್ಷತೆ ವಹಿಸಿದ್ದರು.

ಮಾದುಕೋಡಿ ಕೊರಗಜ್ಜ ದೈವ ಸಾನಿಧ್ಯದ ವಿಜಯ ಸುವರ್ಣ ಗುರೂಜಿ, ಮಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಕೆ. ಶೆಟ್ಟಿ, ಕದ್ರಿ ದೇವಸ್ಥಾನದ ನಾಗೇಶ್ ಕದ್ರಿ, ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ, ಡೊಂಗರಕೇರಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ವರದರಾಯ ಎಸ್. ನಾಗ್ವೇಕರ್, ಗಿರೀಶ್ ಬಿ. ಸಾಲ್ಯಾನ್ ಮುಂಬೈ, ವಾಸ್ತುತಜ್ಞ ರಾಜ್‌ಕುಮಾರ್, ಸದಾಶಿವ ಬಿಜೈ, ಸುರೇಶ್ ಕುಲಾಲ್ ಬಂಟ್ವಾಳ, ಮಠದಕಣಿ ದೇವಸ್ಥಾನದ ಅಧ್ಯಕ್ಷ ಬಾಲಕೃಷ್ಣ ಕಲ್ಬಾವಿ, ಸುರೇಶ್ ಕಾಂಚನ್, ನ್ಯಾಯವಾದಿ ಭಾಸ್ಕರ ಪೆರ್ವಾಯಿ, ಸದಾನಂದ ಕುಲಾಲ್ ಮುಂಬೈ, ರವಿಪ್ರಸಾದ್ ಶೆಟ್ಟಿಗಾರ್ ಕೋಡಿಕಲ್, ಶ್ರೀ ವೀರನಾರಾಯಣ ದೇವಸ್ಥಾನದ ಬೆಂಗಳೂರು ಸಮಿತಿ ಅಧ್ಯಕ್ಷ ಮಾಧವ ಕುಲಾಲ್, ಕೆ. ಯಾದವ ಪೂಜಾರಿ ಕುಲಶೇಖರ, ಮನೋಜ್ ಕುಮಾರ್ ಮೈಸೂರು, ರಾಮ ಬಂಗೇರ ಕಟೀಲು, ಸುರತ್ಕಲ್ ಕುಲಾಲ ಸಂಘದ ದಿನಕರ ಅಂಚನ್, ಮೋಹನ್ ಐ. ಮೂಲ್ಯ ಕುಳಾಯಿ, ತಿಮ್ಮಪ್ಪ ಮೂಲ್ಯ ನೀರುಮಾರ್ಗ, ಚಂದ್ರಹಾಸ ಕುಲಾಲ್ ಕಾಟಿಪಳ್ಳ, ಮಮತಾ ಎಸ್. ಬಂಗೇರ ನವಿಮುಂಬೈ, ದೇವಸ್ಥಾನದ ಸಮಿತಿ ಪದಾಧಿಕಾರಿಗಳಾದ ಮಯೂರ್ ಉಳ್ಳಾಲ್, ಪುರುಷೋತ್ತಮ ಕುಲಾಲ್, ಬಿ. ಪ್ರೇಮಾನಂದ ಕುಲಾಲ್, ಕೆ. ಸುಂದರ ಕುಲಾಲ್, ದಾಮೋದರ ಎ. ಬಂಗೇರ, ಎಂ.ಪಿ. ಬಂಗೇರ ಬಿಜೈ, ಗೀತಾ ಮನೋಜ್, ಗಿರಿಧರ ಜೆ. ಮೂಲ್ಯ, ಬಿ. ಮೋಹನದಾಸ್ ಅಳಪೆ, ರಘು ಎ. ಮೂಲ್ಯ ಮುಂಬೈ, ಸುನಿಲ್ ಆರ್. ಸಾಲ್ಯಾನ್ ಮುಂಬೈ, ದಿವಾಕರ ಮೂಲ್ಯ ಬೆಂಗಳೂರು, ಮಾಧವ ಕುಲಾಲ್ ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.

ವೈಷ್ಣವಿ ಕುಲಾಲ್ ಪ್ರಾರ್ಥಿಸಿ, ಮುಂಬೈ ಸಮಿತಿ ಅಧ್ಯಕ್ಷ ಬಿ. ದಿನೇಶ್ ಕುಲಾಲ್ ಸ್ವಾಗತಿಸಿ, ಪ್ರಸ್ತಾವಿಸಿದರು. ಎಚ್.ಕೆ. ನೈನಾಡು ನಿರೂಪಿಸಿದರು. ಪ್ರವೀಣ್ ಬಸ್ತಿ ವಂದಿಸಿದರು.

ಸಮ್ಮಾನ

ದಾನಿಗಳಾದ ಪ್ರಫುಲ್ಲ ಭಾಸ್ಕರ್, ಸುರೇಶ್ ಕುಲಾಲ್, ಭಾಸ್ಕರ ಎಂ., ಲಕ್ಷ್ಮಣ್ ದೋಟ, ಸಂತೋಷ್ ಕುಲಾಲ್, ದಿನೇಶ್ ಅಂಚನ್, ಹಿತೇಶ್, ದೇವಪ್ಪ ಕೊಲ್ಯ, ಕೃಷ್ಣಪ್ಪ ಅಸೈಗೋಳಿ, ಜಾನಕಿ ಗೋಪಾಲ್, ಸದಾಶಿವ ಬಿಜೈ, ಚಂದ್ರಹಾಸ ಕುಲಾಲ್ ಹಾಗೂ ಪ್ರಫುಲ್ಲ ನಾಗೇಶ್ ಅವರನ್ನು ಸಮ್ಮಾನಿಸಲಾಯಿತು.

ಎಲ್ಲಾ ಕುಲದೊಂದಿಗೆ ಐಕ್ಯತೆಯಿಂದ ಬಾಳಿದ ಸಮುದಾಯ ನಮ್ಮದು. ಎಲ್ಲಾ ಸಮುದಾಯದವರ ಒಡಂಬಡಿಕೆಯಿಂದ ವೀರನಾರಾಯಣ ಕ್ಷೇತ್ರ ಇಂದು ಬೆಳಗಿದೆ. ಕುಲಾಲ ಸಮುದಾಯದ ಅಭಿವೃದ್ಧಿಯ ಸಂಕೇತ ಇದಾಗಿದ್ದು, ಕುಲಾಲರ ಶಕ್ತಿ ಮತ್ತು ಭಕ್ತಿಯ ಅನಾವರಣವಾಗಿದೆ. ಇದು ಹಿಂದೂ ಸಮಾಜದ ದ್ಯೋತಕ.- ಮಾಣಿಲ ಶ್ರೀ

ಇಂದು ವೀರನಾರಾಯಣ ದೇವರಿಗೆ ಬ್ರಹ್ಮಕಲಶ

ಇತಿಹಾಸ ಪ್ರಸಿದ್ಧ ಕುಲಾಲ ಸಮುದಾಯದ ಕುಲದೇವರಾಗಿರುವ ಶ್ರೀ ವೀರನಾರಾಯಣ ದೇವರಿಗೆ ಮೇ ೨೪ರಂದು  ಬ್ರಹ್ಮಕಲಶ ನಡೆಯಲಿದ್ದು, ೭೪ ವರ್ಷದ ಬಳಿಕ ಮತ್ತೆ ಕ್ಷೇತ್ರದಲ್ಲಿ ಇತಿಹಾಸ ಮರುಕಳಿಸಲಿದೆ. ಬೆಳಿಗ್ಗೆ ೮.೫ರಿಂದ ನಡೆಯುವ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ವೀರನಾರಾಯಣ ದೇವರಿಗೆ ಬ್ರಹ್ಮಕಲಶಾಭಿಷೇಕದ ವೈದಿಕ ವಿಧಾನಗಳು ಜರಗಲಿದ್ದು, ಇದಕ್ಕೂ ಮೊದಲು ಉಡುಪಿ ಪೇಜಾವರ ಶ್ರೀಗಳು ಹಾಗೂ ಮಾಣಿಲ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಕವಾಟೋದ್ಘಾಟನೆ, ಹೋಮ ಕಲಶಾಭಿಷೇಕ, ತತ್ವಕಲಶಾಭಿಷೇಕ, ಪರಿಕಲಶಾಭಿಷೇಕಕ್ಕೆ ಚಾಲನೆ ದೊರೆಯಲಿದೆ.

ಮಧ್ಯಾಹ್ನ ೧೧ ರಿಂದ ಮಹಾಪೂಜೆ, ಬಲಿ ಹೊರಟು ಉತ್ಸವ, ರಥೋತ್ಸವ, ಪಲ್ಲಪೂಜೆ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೬ರಿಂದ ರಂಗಪೂಜೆ, ಬಲಿ ಉತ್ಸವ, ರಥೋತ್ಸವ, ಪಲ್ಲಕ್ಕಿ ಉತ್ಸವ, ವಸಂತ ಪೂಜೆ ಮುಂತಾದ ವೈದಿಕ ಪೂಜಾ ವಿಧಾನಗಳು ಜರಗಲಿದೆ. ಸಂಜೆಯ ಧಾರ್ಮಿಕಸಭೆಯಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕಟೀಲು ಕ್ಷೇತ್ರದ ವೇ|ಮೂ| ಲಕ್ಷ್ಮೀನಾರಾಯಣ ಅಸ್ರಣ್ಣರು ಆಶೀರ್ವಚನ ನೀಡಲಿದ್ದಾರೆ. ಮಯೂರ್ ಉಳ್ಳಾಲ್ ಅಧ್ಯಕ್ಷತೆ ವಹಿಸಲಿದ್ದು, ನಳಿನ್ ಕುಮಾರ್ ಕಟೀಲ್, ವಿ. ಸುನಿಲ್ ಕುಮಾರ್, ಡಾ. ಮೋಹನ ಆಳ್ವ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

Leave a Comment