ಬಂಟ್ವಾಳ :ಪ್ರೀತಿ ಗೇಮ್ಸ್ ಕ್ಲಬ್ ಪೆರ್ಮಂಕಿ ಇದರ 42ನೇ ವಾರ್ಷಿಕೋತ್ಸವ ಸಮಾರಂಭವು ಫೆ. 22 ರಂದು ಶನಿವಾರ ವಿಜೃಂಭಣೆಯಿಂದ ನಡೆಯಿತು. ಸಂಘದಲ್ಲಿ ಗಣ ಹೋಮ, ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾರ್ವಜನಿಕ ಶನೇಶ್ವರ ಪೂಜೆ ಮತ್ತು ಅನ್ನ ಸಂತರ್ಪಣೆ ಜರಗಿತು.
ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ,ಯುವ ಜನತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಸರಕಾರಿ ಹುದ್ದೆಗಳನ್ನು ಪಡೆದು ಸಾಮಾಜಿಕ ಸೇವೆ ಸಲ್ಲಿಸಿ ಹಾಗೂ ಸಂಘಟನೆಗಳು ಸಮಾಜದ ಅಭಿವೃದ್ಧಿಗೆ ಕೈಜೋಡಿಸಿ ಎಂದರು.
ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಮುಲ್ಕಿ ಮಾತನಾಡಿ ಸಂಘವು ನಡೆಸುತ್ತಿರುವ ಸಮಾಜಮುಖಿ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪದ್ಮನಾಭ ಕೋಟ್ಯಾನ್ ಮಾತನಾಡಿ ಸಮಾಜದ ಒಳಿತಿಗಾಗಿ ಸಂಘವು ನೀಡುತ್ತಿರುವ ಕೊಡುಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉಳಾಯಿಬೆಟ್ಟು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಹರಿಕೇಶ್ ಶೆಟ್ಟಿ ಭಾಗವಹಿಸಿ ಪಂಚಾಯಿತಿಗೆ ಹಲವು ಪ್ರಶಸ್ತಿಗಳು ಲಭಿಸಲು ಈ ಸಂಘದ ಕೊಡುಗೆ ಹಾಗು ಕಾರ್ಯ ಯೋಜನೆಯನ್ನು ಜನತೆಗೆ ತಲುಪಿಸುವ ಕೆಲಸದಲ್ಲಿ
ಸಂಘವು ಅವಿರತವಾಗಿ ಶ್ರಮಿಸುವುದರ ಬಗ್ಗೆ ತಿಳಿಸಿದರು.
ಪದ್ಮನಾಭ ಶೆಟ್ಟಿ ಪೆರ್ಮಂಕಿ ಗುತ್ತು, ಚಂದ್ರಹಾಸ ಪೂಜಾರಿ, ಡಾ.ಗ್ರೀಷ್ಮ ಆರಂತಕೋಡಿ ಮತ್ತು ಅನ್ಸ್. ಕೆ .ಪಕ್ಕಳ ಪೆರ್ಮಂಕಿ ಗುತ್ತು ಇವರನ್ನು ಸನ್ಮಾನಿಸಲಾಯಿತು . ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಸಮಾರಂಭದಲ್ಲಿ ರಜನೀಶ್ ಶೈಲೇಂದ್ರ ಕೋಟ್ಯಾನ್, ಎನ್. ರವಿರಾಜ್ ರಾವ್,ಶ್ರೀಮತಿ ಸುಭದ್ರ ರಾವ್, ದಿನೇಶ್ ಪೆರ್ಮಂಕಿ, ಪ್ರವೀಣ್ ಪೂಜಾರಿ, ಕಿರಣ್ ಪಕ್ಕಳ ಪೆರ್ಮಂಕಿ ಗುತ್ತು, ಶರೀಫ್ ಕಣಿಬೆಟ್ಟು , ಪ್ರಶಾಂತ್ ಸಲ್ದಾನ ಉಪಸ್ಥಿತರಿದ್ದರು.
ಸುನಿಲ್ ಕುಮಾರ್ ಸ್ವಾಗತಿಸಿದರು. ಪವನ್ ಕುಲಾಲ್ ವರದಿ ವಾಚಿಸಿದರು. ಶ್ರೀನಾಥ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಹಾಗೂ ಮದಿಮೇದ ಇಲ್ಲಡ್ ತುಳು ನಾಟಕವು ಜನಮನ ಸೆಳೆಯಿತು.















