Coastal Bulletin

ಬಂಟ್ವಾಳ: ಇಲ್ಲಿನ ನಿವಾಸಿ, ಭಾರತೀಯ ಸೇನೆಯ ಮಾಜಿ ಬ್ರಿಗೇಡಿಯರ್ ಚಂದ್ರಶೇಖರ ಶೆಟ್ಟಿ(78) ಇವರು ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು

ಮೂಲತ: ಬಂಟ್ವಾಳದವರಾದ ಚಂದ್ರಶೇಖರ ಶೆಟ್ಟಿಯವರು ಬಂಟ್ವಾಳ ಎಸ್.ವಿ.ಎಸ್ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯು, ಉಡುಪಿ ಎಮ್.ಜಿ.ಎಂ. ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದು ಬಳಿಕ ಬೆಂಗಳೂರು ಟಾಟಾ ಸೈನ್ಸ್ ಆಂಡ್ ಟೆಕ್ನೋಲಜಿ ಇನ್ಸ್ಟಿಟ್ಯೂಟ್‌ನಲ್ಲಿ ಬಿ.ಇ. ಮತ್ತು ಎಂ.ಟೆಕ್ ಪದವಿಯನ್ನು ಪಡೆದರು.

ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. 1969ರಲ್ಲಿ ಭಾರತೀಯ ಸೇನೆಯ ಲೆಫ್ಟಿನೆಂಟ್ ಹುದ್ದೆಗೆ ಸೇರ್ಪಡೆಗೊಂಡು ಬಳಿಕ ಅಮೇರಿಕದ ವಾಷಿಂಗ್ಟನ್

ನಲ್ಲಿ ತಾಂತ್ರಿಕ ತರಬೇತಿಗಳಿಸಿ, 1971ರಲ್ಲಿ ನಡೆದ ಭಾರತ - ಪಾಕಿಸ್ಥಾನ ಯುದ್ಧದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ವಿಜ್ಞಾನಿಯಾಗಿದ್ದ ವೇಳೆ ಅವರೊಂದಿಗೆ ರಕ್ಷಣಾ ಇಲಾಖೆ ಪ್ರತಿನಿಧಿಯಾಗಿ ಎಂಟು ವರ್ಷ ದುಡಿದಿದ್ದರು. ಅಗ್ನಿ ಕ್ಷಿಪಣಿ ಉಡಾವಣೆ ಮತ್ತು ಬಾಹ್ಯಾಕಾಶ ಸಂಶೋಧನಾ ತಂಡದಲ್ಲಿ ದುಡಿದು ಸೇವಾ ಮೆಡಲ್ ಗಳಿಸಿದ್ದರು. ಸಕಲ ಮಿಲಿಟರಿ ಗೌರವದೊಂದಿಗೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಬುಧವಾರ ಸರ್ಕಾರಿ ಗೌರವದೊಮದಿಗೆ ಅಂತ್ಯಕ್ರಿಯೆ ನೆರವೇರಿತು.



Leave a Comment