ಬಂಟ್ವಾಳ: ಇಲ್ಲಿನ ಕಾಮಾಜೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ ಲೊರೆಟ್ಟೊ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಸಮಾರೋಪ ಸಮಾರಂಭ ಭಾನುವಾರ ನಡೆಯಿತು.
ಈ ಸಂದರ್ಭ ಸಮಾರೋಪ ಭಾಷಣ ಮಾಡಿದ ಪತ್ರಕರ್ತ ಹರೀಶ ಮಾಂಬಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ, ವಿಮರ್ಶಾ ಗುಣಗಳನ್ನು ರೂಢಿಸಿಕೊಳ್ಳಲು ಪುಸ್ತಕ ಓದುವಿಕೆ ಸಹಕಾರಿಯಾಗುತ್ತದೆ. ಶಿಬಿರದಲ್ಲಿ ದೊರಕಿದ ಪ್ರಾಯೋಗಿಕ ಅನುಭವಗಳು ಮುಂದಿನ ಜೀವನಕ್ಕೆ ನೆರವಾಗುತ್ತದೆ ಎಂದರು.
ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟೆರ್ ಇಡೋಲಿನ್ ವಿದ್ಯಾರ್ಥಿಗಳ ಶಿಸ್ತು, ಸಮಯ
ಪರಿಪಾಲನೆ ಮತ್ತು ಶ್ರಮದಾನ ವನ್ನು ಶ್ಲಾಘಿಸಿದರು. ಕಾಲೇಜಿನ ಪ್ರಿನ್ಸಿಪಾಲ್ ಡಾ. ಪ್ರಕಾಶಚಂದ್ರ ಬಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರಧಿಕಾರಿ ಹೈದರಾಲಿ ಸ್ವಾಗತಿಸಿದರು. ಶಿಬಿರ ಆಯೋಜನೆಗೆ ನೆರವಾದ ಅಮ್ಟಾಡಿ ಗ್ರಾಪಂ ಸದಸ್ಯ ಫೆಲಿಕ್ಸ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಶಿಬಿರದ ನಾಯಕರಾದ ರಿತೇಶ್ ಮತ್ತು ಸುಜನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.















