ಬಂಟ್ವಾಳ :ಜು 30, ಬಿಲ್ಲವ ಮಹಿಳಾ ಸಮಿತಿಯ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ.

Coastal Bulletin
ಬಂಟ್ವಾಳ :ಜು 30, ಬಿಲ್ಲವ ಮಹಿಳಾ ಸಮಿತಿಯ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ.

ಬಂಟ್ವಾಳ :ತಾಲೂಕು ಬಿಲ್ಲವ ಮಹಿಳಾ ಸಮಿತಿಯ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭವು ಜು 30ರಂದು ಆದಿತ್ಯವಾರ ಮಧ್ಯಾಹ್ನ 2.30 ಗಂಟೆಯಿಂದ ಬಿ ಸಿ ರೋಡ್ ಗಾಣದ ಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ನಡೆಯಲಿದೆ.

ಮಾಜಿ ಹಣಕಾಸು ಸಚಿವರ ಧರ್ಮಪತ್ನಿ ಮಾಲತಿ ಜನಾರ್ಧನ ಪೂಜಾರಿ ಸಹಿತ ಅನೇಕ ಗಣ್ಯರು ಪದ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ

ಈ ಸಂದರ್ಭದಲ್ಲಿ "ಅಮ್ಮ" ಆಲ್ಬಮ್ ಸಾಂಗ್ ನ ಮೆಲುಕು ನೋಟ,"ಶಾಂಭವಿ" ಕಿರು ಚಿತ್ರದ ಪ್ರದರ್ಶನ,

ಶ್ರೀ ಶೈಲ ಕಲಾ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ ಹಾಗೂ ವಿಠ್ಠಲ್ ನಾಯಕ್ ಕಲ್ಲಡ್ಕ ತಂಡದಿಂದ "ಗೀತಾ ಸಾಹಿತ್ಯ ಸಂಭ್ರಮ" ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಶೈಲಜಾ ರಾಜೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment