ಬಂಟ್ವಾಳ:ತಾಲೂಕಿನ ನಾವೂರ ಗ್ರಾಮದ ಕೂಡಿಬೈಲು ಎಂಬಲ್ಲಿ14ನೇ ವರುಷದ ತುಳುನಾಡಿನ ಹೆಮ್ಮೆಯ ಪುರಾತನ ಜಾನಪದ ಕ್ರೀಡೆಯಾದ "ಬಂಟ್ವಾಳ ಕಂಬಳ" ಎಂದೇ ಹೆಸರುವಾಸಿಯಾದ ಹೊನಲು ಬೆಳಕಿನ ಮೂಡೂರು -ಪಡೂರು ಜೋಡುಕರೆ ಬಯಲು ಕಂಬಳ ಕೂಟವು ಮಾ. 8ರಂದು ಅದ್ದೂರಿಯಾಗಿ ಉದ್ಘಾಟನೆಗೊಳ್ಳುದರೊಂದಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಂಟ್ವಾಳ ಕಂಬಳಕ್ಕೆ ಆಗಮಿಸಲಿದ್ದಾರೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.
ಅವರು ಫೆ. 22ರಂದು ಶನಿವಾರ ಬಿಸಿರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ಕಂಬಳ ಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ,ಮಾ.8ರಂದು ಶನಿವಾರ ಬೆಳಿಗ್ಗೆ 8:45ಕ್ಕೆ ದಿ ಆಲ್ಬರ್ಟ್ ಪಾಯ್ಸ್ ಕೂಡಿಬೈಲು ವೇದಿಕೆಯಲ್ಲಿ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಪೀಠಾಧಿಪತಿಗಳು, ಕರ್ನಾಟಕ ಆರ್ಯ-ಈಡಿಗ ಮಹಾ ಸಂಸ್ಥಾನ, ಸೋಲೂರು,ವಂದನೀಯ ರಾಬರ್ಟ್ ಡಿಸೋಜ, ಧರ್ಮಗುರುಗಳು, ಸಂತ ಅಂತೋನಿ ಧರ್ಮ ಕೇಂದ್ರ, ಅಲ್ಲಿಪಾದೆ, ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ, ಅರಸರು, ಆಳದಂಗಡಿ ಅರಮನೆ ಇವರ ದಿವ್ಯ ಉಪಸ್ಥಿಯಲ್ಲಿ ಕಂಬಳ ಕೂಟವು ಉದ್ಘಾಟನೆ ಗೊಳ್ಳಲಿದೆ ಎಂದರು.
ಸಂಜೆ ಸಭಾ ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯ ಮಂತ್ರಿಗಳ ಜೊತೆಗೆ ಗೃಹ ಸಚಿವ ಡಾ ಜಿ ಪರಮೇಶ್ವರ್, ಸ್ಪೀಕರ್ ಯುಟಿ.ಖಾದರ್, ರಾಜ್ಯದ ಅನೇಕ ಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತುಳು ಕನ್ನಡ ಸಿನಿಮಾ ರಂಗದ ಹೆಸರಾಂತ ಕಲಾವಿದರು ಭಾಗಿಯಾಗಳಿದ್ದಾರೆ ಎಂದು ತಿಳಿಸಿದರು. ಬಂಟ್ವಾಳ ಕಂಬಳ
ಜಿಲ್ಲೆಯ ವಿಶಿಷ್ಟ ಕಂಬಳವಾಗಿ ಮೂಡಿಬರುವ ನಿಟ್ಟಿನಲ್ಲಿ ಪೂರ್ವತಯಾರಿಗಳು ನಡೆಯುತ್ತಿದೆ ಎಂದ ಅವರು ಮುಖ್ಯಮಂತ್ರಿ ಆಗಮನದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಬೇಕಾಗಿ ವಿನಂತಿಸಿದರು.
ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್ ಮಾತನಾಡಿ, ಎಲ್ಲರನ್ನು ಒಟ್ಟುಗೂಡಿಸಿಕೊಂಡು, ಕಂಬಳ ಸಮಿತಿ ರಚಿಸಿದ್ದು, ಕಂಬಳ ಕೂಟವು ಯಶಸ್ವಿಯಾಗಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕಂಬಳ ಸಮಿತಿ ಪ್ರಮುಖರಾದ ಬೇಬಿ ಕುಂದರ್, ಅಬ್ಬಾಸ್ ಆಲಿ, ಬಾಲಕೃಷ್ಣ ಅಂಚನ್, ರಾಜೀವ ಶೆಟ್ಟಿ ಎಡ್ತೂರು, ಚಂದ್ರಶೇಖರ ಭಂಡಾರಿ, ಸುದೀಪ್ ಶೆಟ್ಟಿಮಾಣಿ , ಸುದರ್ಶನ ಜೈನ್, ಪದ್ಮನಾಭ ರೈ, ಶಬೀರ್, ವೆಂಕಪ್ಪ ಪೂಜಾರಿ, ಸುರೇಶ್ ಕುಲಾಲ್ ನಾವೂರ, ಸಿದ್ದೀಕ್ ಗುಡ್ಡೆಯಂಗಡಿ, ಮಹಮ್ಮದ್ ಶರೀಫ್,ರಾಜೇಶ್ ರೋಡ್ರಿಗಸ್,ರಾಮಕೃಷ್ಣ ಆಳ್ವ, ಬಿ ಮೋಹನ್, ದೇವಪ್ಪ ಕುಲಾಲ್ ಪಂಜಿಕಲ್ಲು,ಸದಾಶಿವ ಬಂಗೇರ, ಉಮೇಶ್ ನಾವೂರ, ಮಹಮ್ಮದ್ ನಂದಾವರ, ರಾಜೀವ ಕಕ್ಯೆಪದವು ಮತ್ತಿತರರು ಉಪಸ್ಥಿತರಿದ್ದರು.














