ಬಂಟ್ವಾಳ: ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಕ್ರೀಡೋತ್ಸವ ಸಮಿತಿ ಸಹಿತ ಯುವವಾಹಿನಿ ಮತ್ತು ಮಹಿಳಾ ಘಟಕದ ಸಹಭಾಗಿತ್ವದಲ್ಲಿ ಭಂಡಾರಿಬೆಟ್ಟು ಎಸ್ ವಿ ಎಸ್ ಕ್ರೀಡಾಂಗಣದಲ್ಲಿ ಜ.25ರಂದು 2ನೇ ವರ್ಷದ 'ಕೋಟಿ-ಚೆನ್ನಯ' ಕ್ರೀಡೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ಸಮಿತಿ ಸಂಚಾಲಕ ಬೇಬಿ ಕುಂದರ್ ಹೇಳಿದ್ದಾರೆ.ತಿಳಿಸಿದರು.
ಬಿಸಿರೋಡಿನಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 'ಅಂದು ಬೆಳಿಗ್ಗೆ ಗಂಟೆ 9ರಿಂದ ಸಂಜೆ 6 ಗಂಟೆತನಕ ವಿವಿಧ ವಲಯ ಸಂಘಗಳ ನಡುವೆ ನಡೆಯುವ ಈ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಚಾಲನೆ ನೀಡಲಿದ್ದು, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮತ್ತು ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಗೌರವ ರಕ್ಷೆ ಸ್ವೀಕರಿಸುವರು ಎಂದರು. ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಅಧ್ಯಕ್ಷತೆಯಲ್ಲಿ ನಡೆಯುವ ಈ ಕ್ರೀಡೋತ್ಸವದಲ್ಲಿ ಬೆಂಗಳೂರು ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಶಾಂತಾರಾಮ ಕುಂದರ್ ಧ್ವಜಾರೋಹಣ ನೆರವೇರಿಸಲಿದ್ದು, ಗುರುಧರ್ಮ ಪ್ರಚಾರಸಭಾ ಸಂಚಾಲಕ ಗೋಪಿಕೃಷ್ಣಪ್ಪ ಕ್ರೀಡಾ ಜ್ಯೋತಿ ಹಸ್ತಾಂತರಿಸುವರು. ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸಮಿತಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಮುಂಬೈ ಭಾರತ್ ಕೋ ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ, ನಾರಾಯಣ ಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಂಜುನಾಥ ಪೂಜಾರಿ ಕ್ರೀಡಾಕೂಟಕ್ಕೆ ಚಾಲನೆ ನೀಡುವರು ಎಂದು ಹೇಳಿದರು.
ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಮಾತನಾಡಿ, ಸಮಾರೋಪ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ವಿದ್ಯುತ್ ಸರಬರಾಜು ನಿಗಮ ಅಧ್ಯಕ್ಷ ಕೆ.ಹರೀಶ ಕುಮಾರ್ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಪ್ರತಿಭಾ ಕುಳಾಯಿ, ಉದ್ಯಮಿ ವಿಜಯ ಪೂಜಾರಿ ಕುಂದಾಪುರ,
ಮುಖ್ಯಮಂತ್ರಿಗಳ ಮಾಜಿ ಆಪ್ತ ಸಹಾಯಕರಾದ ಜಗನ್ನಾಥ್ ಬಂಗೇರ ನಿರ್ಮಲ್, ಬಿಲ್ಲವ ಸಂಘ ಹುಬ್ಬಳ್ಳಿ-ಧಾರವಾಡ ಅಧ್ಯಕ್ಷರಾದ ವಿವೇಕಾನಂದ ಪೂಜಾರಿ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್, ಬಿರುವೆರ್ ಕುಡ್ಲ ಸಂಸ್ಥಾಪಕರಾದ ಉದಯ ಪೂಜಾರಿ, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಮ್, ಉದ್ಯಮಿಗಳಾದ ಪ್ರಶಾಂತ್ ಸನಿಲ್, ಮನೋಜ್ ಸರಿಪಲ್ಲ, ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ, ಅಧ್ಯಕ್ಷರಾದ, ಚಿತ್ತರಂಜನ್, ಸೂರತ್ ಬಿಲ್ಲವ ಸಂಘ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ, ಉದ್ಯಮಿಗಳಾದ ಸುರೇಶ್ ಕರ್ಕೇರಾ, ಲೋಕೇಶ್ ಸುವರ್ಣ ಕಲ್ಲಡ್ಕ ಉಪಸ್ಥಿತರಿರುವರು.
ಪುರುಷರ ವಿಭಾಗದಲ್ಲಿ ಕಬಡ್ಡಿ , ಹಗ್ಗಜಗ್ಗಾಟ, ವಾಲಿಬಾಲ್, ಮಹಿಳೆಯರ ವಿಭಾಗದಲ್ಲಿ ತ್ರೋಬಾಲ್, ಹಗ್ಗಜಗ್ಗಾಟ ಗುಂಪು ಸ್ಪಧರ್ೆಗಳು ಹಾಗೂ ವಿವಿಧ ವಿಭಾಗಗಳಲ್ಲಿ 50 ಮೀ, 100 ಮೀ, 200 ಮೀ, ರಿಲೇ, ಗುಂಡೆಸೆತ, ಉದ್ದಜಿಗಿತ, ನಡಿಗೆ, ಅದೃಷ್ಟದಾಟ ಮತ್ತಿತರ ಸ್ಪರ್ದೇಗಳು ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಜೆ. ಎಸ್. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ, ಕೋಶಾಧಿಕಾರಿ ಸುಂದರ ಪೂಜಾರಿ ಬೋಳಂಗಡಿ, ಜತೆ ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಕುದನೆ, , ಕೋಶಾಧಿಕಾರಿ ಸುನಿಲ್ ಕುಂದರ್, ಜತೆ ಕಾರ್ಯದರ್ಶಿ ಆನಂದ ಸಾಲ್ಯಾನ್, ಆಂತರಿಕ ಲೆಕ್ಕ ಪರಿಶೋಧಕ ಪ್ರಶಾಂತ್ ಕೋಟ್ಯಾನ್ ಉಪಸ್ಥಿತರಿದ್ದರು.















