ಬಂಟ್ವಾಳ: ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿದಾಗ ಅವರಿಂದ ಉನ್ನತ ಸಾಧನೆ ಮೂಡಿ ಬರುತ್ತದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡೊಂಬಯ ಬಿ.ಅರಳ ಹೇಳಿದ್ದಾರೆ
ಇಲ್ಲಿನ ಅರಳ ನವಶಕ್ತಿ ಯುವಕ ಮಂಡಲ ವತಿಯಿಂದ ಭಾನುವಾರ ಸಂಜೆ ನಡೆದ 'ಕರ್ಣಾರ್ಜುನ 'ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಅವರು ಸಾಧಕರನ್ನು ಪರಿಚಯಿಸಿ ಮಾತನಾಡಿದರು.
ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗಸ್ವರ ವಾದಕ ನಾಗೇಶ ಶೇರಿಗಾರ್ ಅರಳ ಮತ್ತು ಯಕ್ಷಗಾನ ಕಲಾವಿದ ಗಣೇಶ ರೈ ಅರಳ ಇವರನ್ನು ಸನ್ಮಾನಿಸಲಾಯಿತು.
ಹಿರಿಯ ಕಲಾವಿದ ದಿನೇಶ
ಶೆಟ್ಟಿ ಕಾವಳಕಟ್ಟೆ, ಯಕ್ಷಗುರು ಗಣೇಶ ಶರ್ಮ, ಸಂಘದ ಮಾಜಿ ಅಧ್ಯಕ್ಷ ಜಗಧೀಶ ಆಳ್ವ ಅಗ್ಗೊಂಡೆ, ಅಧ್ಯಕ್ಷ ಶಿವರಾಮ ಸಂಗಬೆಟ್ಟು, ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಸತೀಶ ಡಿಕೋಸ್ತ, ಪ್ರಮುಖರಾದ ರಂಜನ್ ಕುಮಾರ್ ಶೆಟ್ಟಿ, ಉಮೇಶ ಡಿ.ಎಂ., ಮಂಜಪ್ಪ ಅರಳ ಮತ್ತಿತರರು ಇದ್ದರು.














