ಬಂಟ್ವಾಳ :ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಅಪ್ಪದ ಪೂಜೆ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ಏಕಾಹ ಭಜನೆ ಕಾರ್ಯಕ್ರಮಕ್ಕೆ ದೇವಳದ ಅರ್ಚಕ ನಾರಾಯಣ ಭಟ್ ಚಾಲನೆ ನೀಡಿದರು.
ಅಪ್ಪದ ವಿಶೇಷತೆ:
36 ಮುಡಿ ಅಕ್ಕಿ, 11 ಕ್ವಿಂಟಾಲ್ ಬೆಲ್ಲ, 260 ಲೀಟರ್ ತುಪ್ಪ, 600 ತೆಂಗಿನಕಾಯಿ, 3 ಕೆ.ಜಿ ಏಲಕ್ಕಿ ಬಳಸಿ ಬಾಣಸಿಗ ಚಂದ್ರಶೇಖರ ರಾವ್ ನೂಯಿ ನೇತೃತ್ವದ 38 ಮಂದಿ ತಂಡದಿಂದ ಏಕಕಾಲಕ್ಕೆ 550 ಅಪ್ಪದಂತೆ 15 ಗಂಟೆಯಲ್ಲಿ ಒಟ್ಟು
60 ಸಾವಿರ ಅಪ್ಪ ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ.
ಪ್ರಾಧಾನ ಅರ್ಚಕ ಮಾಧವ ಭಟ್, ಪರಮೇಶ್ವರ ಭಟ್, ಸುಬ್ರಹ್ಮಣ್ಯ ತಂತ್ರಿ, ಅನುವಂಶಿಕ ಮೊಕ್ತೆಸರ ಡಾ.ಮಂಜಯ್ಯ ಶೆಟ್ಟಿ, ಯು.ತಾರಾನಾಥ ಆಳ್ವ, ಚೇರ ಸೂರ್ಯ ನಾರಾಯಣ ರಾವ್, ವೆಂಕಟೇಶ ನಾವಡ, ಕಾರ್ಯನಿರ್ವಹಣಾಕಾರಿ ಪಿ. ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.














