ಬಂಟ್ವಾಳ :ಭಾರತೀಯ ಜನತಾ ಪಾರ್ಟಿ, ನರಿಕೊಂಬು, ಓಂ ಶ್ರೀ ಗೆಳೆಯರ ಬಳಗ (ರಿ.), ನ್ಯಾಲ ನರಿಕೊಂಬು,ಶ್ರೀ ದೇವಿ ಯುವಕ ಮಂಡಲ, ನ್ಯಾಲ ಕಾಪಿಕಾಡು,ನರಿಕೊಂಬು ಕುಂಬಾರರ ಯಾನೆ ಕುಲಾಲರ ಸಂಘ (ರಿ.), ನರಿಕೊಂಬು ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಸೇವಾ ಸಮಿತಿ, ನ್ಯಾಲ-ಮರ್ದೋಳಿ-ಕಾಪಿಕಾಡು ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಗ್ರಾ.ಪಂ.ಸದಸ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು ಮತ್ತು ಸಮಾಜ ಸೇವಾ ಸಹಕಾರಿ ಸಂಘ ನಿ.ಬಂಟ್ವಾಳ ಇದರ ನಿರ್ದೇಶಕರಾದ ಅರುಣ್ ಕುಲಾಲ್ ಬೋರುಗುಡ್ಡೆ ಇವರಿಗೆ ಸಾರ್ವಜನಿಕ ಶ್ರದ್ದಾಂಜಲಿ ಸಭೆಯು ಮೇ 19ರಂದು ಸಂಜೆ ಗಂಟೆ 5:00ಕ್ಕೆ ಸತ್ಯಶ್ರೀ ಕಲ್ಯಾಣ ಮಂಟಪ, ಪಾಣೆಮಂಗಳೂರು ಇಲ್ಲಿ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















