ಬಂಟ್ವಾಳ: ವರ್ತಮಾನದಲ್ಲಿ ನಾನು, ನನ್ನ ಪರಿವಾರ ಮತ್ತು ನನ್ನ ವ್ಯವಹಾರ ಎನ್ನುವ ಮನಸ್ಥಿತಿ ಹೆಚ್ಚಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿಯೂ ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಾ, ವಿವಿಧ ಸೇವಾಯೋಜನೆಗಳನ್ನು ನೈಜ ಫಲಾನುಭವಿಗಳಿಗೆ ತಲುಪಿಸುವ ಯುವಜನರ ಕಾಳಜಿ ಶ್ಲಾಘನೀಯ ಎಂದು ಶ್ರೀನಿವಾಸ್ ಫೌಂಡೇಶನ್ ಮುಂಬೈ ಸಂಸ್ಥಾಪಕ ಶ್ರೀನಿವಾಸ್ ಪಿ. ಸಪಲ್ಯ ನುಡಿದರು.
ಆ 17 ಭಾನುವಾರ ಪಾಣೆಮಂಗಳೂರಿನ ಸುಮಂಗಲಾ ಕಲ್ಯಾಣ ಮಂಟಪದಲ್ಲಿ ವಿಶ್ವ ಗಾಣಿಗರ ಚಾವಡಿ ಮಂಗಳೂರು, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಸಂಯುಕ್ತಾಶ್ರಯದಲ್ಲಿ ನಡೆದ ವೈದ್ಯಕೀಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಪ್ರತಿಕ್ಷೇತ್ರದಲ್ಲೂ ತನ್ನ ಅಮೂಲ್ಯ ಸೇವೆಗಳನ್ನಿತ್ತು. ಅಪ್ರತಿಮ ಸಾಧಕರಾಗಿರುವ ಶ್ರೀನಿವಾಸ್ ಪಿ. ಸಾಪಲ್ಯರವರ ಬಡವರ ಪರ ಕಾಳಜಿ, ಪ್ರಾಮಾಣಿಕತೆ ನಮ್ಮೆಲ್ಲರಿಗೂ ಸ್ಪೂರ್ತಿತುಂಬಿದೆ ಎಂದು ಮುಂಬೈ ಸಾಪಲ್ಯ ಸೇವಾಸಂಘ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಟಿ. ಸಪಲಿಗ ಮುಂಬೈ ಬಣ್ಣಿಸಿದರು.
ಚಿರಾವಿ ಆಪ್ಟಿಕಲ್ಸ್ ಪಾಣೆಮಂಗಳೂರು ಜಂಟಿ ಆಶ್ರಯದಲ್ಲಿ ನೇತ್ರ ತಪಾಸಣೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ರಕ್ತದಾನ ಶಿಬಿರ ಮತ್ತು ಶ್ರೀನಿವಾಸ್ ಫೌಂಡೇಶನ್ ಮುಂಬೈ ಮತ್ತು ಯುಎಇ ಗಾಣಿಗ ಫ್ಯಾಮಿಲಿ ದುಬೈ ಸಂಯುಕ್ತಾಶ್ರಯದಲ್ಲಿ ಗೇನದ ತುಡರ್ ವಿದ್ಯಾನಿಧಿ ಹಸ್ತಾಂತರ ಕಾರ್ಯಕ್ರಮ ನಡೆಸಲಾಯಿತು.
ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ವೇದವ ಗಾಣಿಗ, ರತಿಕಾ ಶ್ರೀನಿವಾಸ್ ಸಪಲ್ಯ, ಪಾಣೆಮಂಗಳೂರಿನ ಸುಮಂಗಲಾ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ವಸಂತ ಪಿ., ಉದ್ಯಮಿ ಮಾಧವ ಮಾವೆ, ನರಿಕೊಂಬು ಗ್ರಾ.ಪಂ ಅಧ್ಯಕ್ಷ ಸಂತೋಷ್ ಕುಮಾರ್, ಸಫಲ ತ್ರೈಮಾಸಿಕ ಪತ್ರಿಕೆ ಸಂಪಾದಕ ಭಾಸ್ಕರ ಎಸ್. ಎಡಪದವು, ಉದ್ಯಮಿ ಭುವನೇಶ್ ರಘು ಸಪಲ್ಯ, ಮುಂಬೈ ಸಾಪಲ್ಯ ಸೇವಾ ಸಂಘ ಸದಸ್ಯರಾದ ಹೇಮಂತ್ ಸಪಲಿಗ ಮುಂಬೈ, ಕಿರಣ್‌ಕುಮಾರ್ ಮುಂಬೈ, ಭಾರತೀಯ ಕ್ಯಾನ್ಸರ್ ಸೊಸೈಟಿಯ ಪ್ರಾದೇಶಿಕ ಸಂಯೋಜಕ ರಂಜನ್ ಎ.ವಿ, ಮಂಗಳೂರಿನ ಲಯನ್ಸ್ ಕ್ಲಬ್ ಅಧ್ಯಕ್ಷ
ನವೀನ್ ನಾಯ್ಕ್, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆಂಕಾಲಜಿ ವಿಭಾಗದ ವೈದ್ಯ ಡಾ. ಕುಮಾರ್ ಎಸ್ ವಶಿಷ್ಠ, ವಿದ್ಯಾ ಮೋಹನ್, ರೈನಾ ಮಸ್ಕರೇನಸ್, ಬಾಲಕೃಷ್ಣ ಸೆರ್ಕಳ, ಸಚಿನ್ ಮೆಲ್ಕಾರ್, ಯೋಗೀಶ್ ಸಪಲ್ಯ ಜಕ್ರಿಬೆಟ್ಟು, ಯಶೋಧರ ಕರ್ಬೆಟ್ಟು, ಜಗದೀಶ್ ಕುಂದರ್, ಉಮೇಶ್ ಪಾಣೆಮಂಗಳೂರು, ವಿದ್ಯಾಪುಷ್ಪರಾಜ್, ಪುರುಷೋತ್ತಮ ಟೈಲರ್ ನರಿಕೊಂಬು, ಕೃಷ್ಣಪ್ಪ ಅಂತರ, ಯೋಗೀಶ್ ಬೋಳಂತೂರು, ಪತ್ರಕರ್ತ ಜಯಾನಂದ ಪೆರಾಜೆ, ಮೋಹನ್ ಶ್ರೀಯಾನ್ ರಾಯಿ, ನಿವೃತ್ತ ಎಎಸ್‌ಐ ಮೋಹನ್ ಉಳ್ಳಾಲ, ಸುಂದರ ಮೆಂಡನ್ ಸೋಮೇಶ್ವರ, ಅನಂತ ವಿಜಯ್ ತುಂಬೆ, ಹರಿಪ್ರಸಾದ್ ಶಕ್ತಿನಗರ, ದೇವಿಪ್ರಸಾದ್ ಎಂ, ಅಭಿಷೇಕ್ ಧರ್ಮಸ್ಥಳ,ವಿನಯ ಅನಂತವಿಜಯ್ ತುಂಬೆ, ಸುಶ್ಮಿತಾ ಉಪ್ಪಿನಂಗಡಿ, ಗಾಯತ್ರಿ ಬಂಗೇರ, ವನಿತಾ ಕರಿಂಗಾನ, ಶರ್ಮಿಳಾ ಅಳಪೆ, ಹೇಮಾ ಅಶೋಕ್ ಸೋಮೇಶ್ವರ, ಸುಮಿತ್ರಾ ಕಳ್ಳಿಗೆ, ಯುವರಾಜ್ ಬೋಳಂಗಡಿ, ಸಂದೀಪ್ ಮೆಂಡನ್ ಎಡಪದವು, ದೇವರಾಜ್ ಎಡಪದವು, ಹರಿಶ್ಚಂದ್ರ ಶಕ್ತಿನಗರ, ಸುಶಾನ್ ಪಾಣೇರ್, ಚೇತನ್ ವಗ್ಗ, ದೀಪಕ್ ಅಡ್ಯಾರ್, ಸಂದೀಪ್ ಪಲ್ಲಮಜಲು, ಸಚಿನ್ ಪಂಡಿತ್‌ಹೌಸ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀಕಾಂತ್ ಗಾಣಿಗ ನರಿಕೊಂಬು ಸ್ವಾಗತಿಸಿದರು. ವಿಜಯ ವೈ ಬೋಳಂತೂರು ನಿರೂಪಿಸಿದರು. ಶಮಿತ್ ಮತ್ತು ಸಮೀಕ್ಷಾ ಪ್ರಾರ್ಥಿಸಿದರು. ದೀಕ್ಷಿತಾ ಕುರ್ನಾಡು, ಅನಿತಾ ಜಿ. ಕೊಲ್ಲೂರು ವರದಿ ವಾಚಿಸಿದರು. ಗಣೇಶ್ ಜಿ ಕೊಲ್ಲೂರು ವಂದಿಸಿದರು.
ಪೆನ್ಸಿಲ್ ಆರ್ಟ್ಗೆ ಭಾರೀ ಮೆಚ್ಚುಗೆ
ತನ್ನ ಶೈಕ್ಷಣಿಕ ಬದುಕಿಗೆ ನೆರವಾದ ಶ್ರೀನಿವಾಸ್ ಪಿ ಸಪಲ್ಯರಿಗೆ ಧನ್ಯವಾದ ಸಮರ್ಪಿಸಲು ತನ್ನಲ್ಲಿರುವ ಚಿತ್ರಕಲಾ ಕೌಶಲ್ಯವನ್ನು ಪ್ರದರ್ಶಿಸಿ ಪೆನ್ಸಿಲ್ ಆರ್ಟ್ನಲ್ಲಿ ಚಿತ್ರವನ್ನು ಬರೆದು ಸಮರ್ಪಿಸಿದ ಬೆಳ್ತಂಗಡಿ ತಾಲೂಕಿನ ನಾಳ ನಿವಾಸಿ ವಿದ್ಯಾರ್ಥಿನಿ ಪಂಚಮಿ ಪ್ರತಿಭೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಗಾಣದ ಬದುಕು ಬಗೆಗಿನ ಕಲಾಕೃತಿಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.















