ಬೆಂಜನಪದವು: ಬಡ ಕುಟುಂಬಕ್ಕೆ ಪುನರ್ನಿಮಾಣದ ಮನೆ ಹಸ್ತಾಂತರ. ದೀನ ದುಃಖಿತರ ಕಷ್ಟಗಳಿಗೆ ಜೊತೆಯಾಗೋಣ: ಶ್ರೀವಿವೇಕಾಚ್ಯೆತನ್ಯಾನಂದ ಸ್ವಾಮೀಜಿ.

Coastal Bulletin
ಬೆಂಜನಪದವು: ಬಡ ಕುಟುಂಬಕ್ಕೆ ಪುನರ್ನಿಮಾಣದ ಮನೆ ಹಸ್ತಾಂತರ. ದೀನ ದುಃಖಿತರ ಕಷ್ಟಗಳಿಗೆ ಜೊತೆಯಾಗೋಣ: ಶ್ರೀವಿವೇಕಾಚ್ಯೆತನ್ಯಾನಂದ ಸ್ವಾಮೀಜಿ.

ಬಂಟ್ವಾಳ :ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಕಳ್ಳಿಗೆ ಬಂಟ್ವಾಳ ತಾಲೂಕು ಇದರ ಅಶ್ರಯದಲ್ಲಿ ದಾನಿಗಳ ಸಹಕಾರದೊಂದಿಗೆ, ಪೊಳಲಿ ರಾಮಕೃಷ್ಣ ತಪೋವನದ ಪೂಜ್ಯ ಶ್ರೀ ವಿವೇಕಾಚ್ಯೆತನ್ಯನಂದ ಸ್ವಾಮೀಜಿಯವರ ಆಶೀರ್ವಾದದಿಂದ ಶ್ರೀರಾಮ ನಗರ ಬೆಂಜನಪದವಿನಲ್ಲಿ ಪುನರ್ನಿಮಾಣಗೊಂಡ ಮನೆಯನ್ನು ದೇವಕಿ ಚಂದ್ರಹಾಸ ಇವರ ಬಡ ಕುಟುಂಬಕ್ಕೆ ಭಾರತ ಮಾತೆಯ ಭಾವಚಿತ್ರವನ್ನು ನೀಡುವ ಮೂಲಕ ಆ 17ರಂದು ಹಸ್ತಾಂತರಿಸಲಾಯಿತು.

ಬಳಿಕ ಆಶೀರ್ವಾಚನ ನೀಡಿದ ಸ್ವಾಮೀಜಿ ಇಂತಹ ದೀನ ದುಃಖಿತರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯದಲ್ಲಿ ಎಲ್ಲರೂ ಕ್ಯೆ ಜೋಡಿಸುವ ಮೂಲಕ ಅಂತವರ ಬದುಕಿನಲ್ಲೂ ಬೆಳಕು ಕಾಣುವಂತಾಗಲಿ ಇಂತಹ ಸಮಾಜಮುಖಿ ಚಟುವಟಿಕೆಗಳಲಿ ಸದಾ ನಿಮ್ಮೊಂದಿಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದರು.

ಮನೆ ಪುನಃರ್ನಿಮಾಣಕ್ಕೆ ಸಹಕರಿಸಿದ ದಾನಿಗಳಿಗೆ ಶಾಲು ಹಾಕಿ ಆಶೀರ್ವಾದಿಸಿದರು. ಪೂಜ್ಯರಾದ ಶ್ರೀ ಗಣೇಶ ಭಟ್ ಸುಜೀರು ವ್ಯೆದಿಕ ವಿಧಿವಿದಾನದೊಂದಿಗೆ ಗಣಹೋಮ ನಡೆಸಿಕೊಟ್ಟರು.

ದಾನಿಗಳಾಗಿ ಸಹಕರಿಸಿದ ಪ್ರೀಯದರ್ಶಿನಿ ಸುನಿಲ್ ಧರಿಬಾಗಿಲು, ಬಬಿತಾ

ಅಶ್ವಿನ್ ಕರ್ಕೇರ ಮುಂಡಾಜೆ, ಶೇಖರ ಬೆಳ್ಚಾಡ ಮುಂಡಾಜೆ, ರಮಾನಂದ ಶೆಟ್ಟಿ ಬೆಂಜನಪದವು,ಕಳ್ಳಿಗೆ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಪುರುಷೋತ್ತಮ ಕೊಟ್ಟಾರಿ, ಗ್ರಾಮ ವಿಕಾಸ ತಾಲೂಕು ಸಂಯೋಜಕ ಮನೋಹರ ಕಂಜತ್ತೂರು, ಗ್ರಾಮ ವಿಕಾಸ ನೆತ್ತರಕೆರೆ ಸಂಯೋಜಕ ಸಂತೋಷ ಕುಮಾರ್ ನೆತ್ತರಕೆರೆ, ಗ್ರಾಮ ಪಂಚಾಯತ್ ಸದಸ್ಯರಾದ ರೇಷ್ಮಾ, ಅಂಗನವಾಡಿ ಶಿಕ್ಷಕ್ಷಿ ರೇಖಾ ಉಪಸ್ಥಿತರಿದ್ದರು. 

ಈ ಸೇವಾ ಕಾರ್ಯದಲ್ಲಿ ಸಹಕರಿಸಿದ ಶ್ರೀದುರ್ಗಾ ಯುವಕ ಮಂಡಲ, ಶ್ರೀನಿಧಿ ಮಾತೃಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರ್ವಹಿಸಿದರು

Leave a Comment