ಬಂಟ್ವಾಳ:ರಾಜ್ಯದಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿ ಬಿಜೆಪಿ ಸರ್ಕಾರ ಪತನಗೊಂಡು ಜಾತ್ಯಾತೀತ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪಕ್ಷದ ಹೈಕಮಾಂಡ್ ನಿಧರ್ಾರದಂತೆ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಶೀಘ್ರವೇ ನಡೆಯಲಿದ್ದು, ಅರ್ಹತೆ ಹೊಂದಿರುವ ಎಲ್ಲಾ ಫಲಾನಭವಿಗಳಿಗೂ ಗ್ಯಾರಂಟಿ ಕಾರ್ಡ್ ಸವಲತ್ತು ಸಿಗಲಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಬಂಟ್ವಾಳದಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮನೆಗೆ ಬುಧವಾರ ಸಂಜೆ ಭೆಟಿ ನೀಡಿ ಅವರ ಆಶೀವರ್ಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈಗಾಗಲೇ ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಸಹಿತ ಧಾಮರ್ಿಕ ಮುಖಂಡರನ್ನು ಭೇಟಿಯಾಗಿ ಆಶೀವರ್ಾದ ಪಡೆದಿದ್ದು, ನನಗೆ ವಿದ್ಯಾಥರ್ಿ ದೆಸೆಯಿಂದಲೇ ಪೂಜಾರಿ ಅವರು ವಿವಿಧ ಜವಾಬ್ದಾರಿ ನೀಡಿ ಮಾರ್ಗದರ್ಶನ ನೀಡಿದ್ದಾರೆ. ಇದೀಗ ಎಲ್ಲರನ್ನೂ ಒಟ್ಟಾಗಿ ಸಮಾನತೆಯಿಂದ ಕರೆದೊಯ್ಯಲು ಸಲಹೆ ಮತ್ತು ಆಶೀವರ್ಾದ ನೀಡಿದ್ದಾರೆ ಎಂದರು. ನನಗೆ ಈ ಹಿಂದೆ ನೀಡಿದಂತೆ
ಸಕರ್ಾರ ಯಾವ ಹುದ್ದೆ ನೀಡಿದರೂ ಅದನ್ನು ಯಶಸ್ವಿಯಾಗಿ ನಿರ್ವಹಿಸಲು ಬದ್ಧ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಮತಾ ಎಸ್.ಗಟ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಹಾಸ ಕಕರ್ೇರ, ಪ್ರಮುಖರಾದ ಸದಾಶಿವ ಉಳ್ಳಾಲ್, ಈಶ್ವರ ಉಳ್ಳಾಲ್, ಸಂತೋಷ್ ಶೆಟ್ಟಿ, ಅಬ್ದುಲ್ ರಝಾಕ್ ಕುಕ್ಕಾಜೆ, ಹಾಸಿರ್ ಪೇರಿಮಾರ್, ಅರುಣ್ ಡಿಸೋಜ, ದೇವದಾಸ ಭಂಡಾರಿ, ಹುಸೈನ್ ಕುಂಞಿಮೋನು, ಮಲ್ಲಿಕಾ ಪಕ್ಕಳ, ದೀಪಕ್ ಪಿಲಾರ್, ಫಾರೂಕ್ ದೇರಳಕಟ್ಟೆ, ದಿನೇಶ ಪೂಜಾರಿ, ಮಹಮ್ಮದ್ ಮುಕ್ಕಚೇರಿ, ಸುರೇಶ್ ಭಡ್ನಾಗರ್, ಮುರಳೀಧರ ಶೆಟ್ಟಿ, ಶಮೀರ್ ಂಜೀರು ಮತ್ತಿತರರು ಇದ್ದರು















