ಬಂಟ್ವಾಳ :ನಾವು ಸಮಾಜಮುಖಿಯಾದಾಗ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಎಂದು ಉದ್ಯಮಿ ಹಾಗೂ ಸಮಾಜಸೇವಕರಾದ ಡಾ.ರವಿ ಕಕ್ಕೆಪದವು ನುಡಿದರು.
ಇವರು ಮಾತೃಭೂಮಿ ಸೇವಾ ಸಂಘ ನಾವೂರು ಒಂದು ವರುಷ ಪೂರೈಸುವ ಸುಸಂಧರ್ಭದಲ್ಲಿ ಸಂಘದ ಮುಂದಾಳತ್ವದಲ್ಲಿ ನಡೆದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಹಾಗೂ ಯೋಧ ನಮನ ಕೃತಜ್ಞತಾ ಅರ್ಪಣಾ ,ಚಿಣ್ಣರ ಚಿತ್ತಾರ, ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶುಭ ಹಾರೈಸಿದರು. ಲೇಖಕರು ಸಾಹಿತಿ ಉಪನ್ಯಾಕರಾದ ರಘ ಇಡ್ಕಿದು ಸಮಾಜದ ಅಭಿವೃದ್ಧಿಗೆ ಸಮಾಜಮುಖಿ ಸಂಘಟನೆಗಳ ಜೊತೆ ಸಮಾಜ ಕೈಜೋಡಿಸಿದರೆ ಇನ್ನಷ್ಟು ಸಾಧ್ಯ ಎಂಬ ಅಭಿಪ್ರಾಯ ಮಂಡಿಸಿದರು.
ಪೋಷಕರ ವರ್ತನೆಗಳು ಕೂಡ ಮಕ್ಕಳ ಬೆಳವಣಿಗೆಗೆ ಪರಿಣಾಮ ಬೀರುತ್ತದೆ ಎಂದು ಅಂತರಿಕ ಭದ್ರತಾ ವಿಭಾಗದ ಸಹಾಯಕ ಉಪ ಉಪನಿರೀಕ್ಷಕರಾದ ಶ್ರೀ ಗೋಪಾಲಕೃಷ್ಣ ಕುಂದರ್ ಹೇಳಿದರು.
ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಶೆಟ್ಟಿ ಪುಲಿಮಜಲು ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸೈನಿಕರ ಸಂಘದ ಗೌರವ ಅಧ್ಯಕ್ಷರಾದ ಕ್ಯಾಪ್ಟನ್ ದಾಸಪ್ಪ ಪೂಜಾರಿ,ನಾವೂರು ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಇಂದಿರಾ ,ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಜಯರಾಮ್ ,ಉಳಿಬೈಲಿನ ಸಹಶಿಕ್ಷಕರಾದ ಶ್ರೀ ಅಕ್ಬರ್ ಆಲಿ, ಉದ್ಯಮಿ ಸುಂದರ ಕುಲಾಲ್ ಕಲ್ಪವೃಕ್ಷ,
ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶ್ರೀಮತಿ ನಾಗರತ್ನ,ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರವೀಂದ್ರ, ಮಡಿಕಲ್ ಉದ್ಯಮಿ ರಾಜೇಂದ್ರ ಜೈನ್ ಶಾಲೆಯ ಮಾಜಿ ಮುಖ್ಯ ಶಿಕ್ಷಕಿ ಶ್ರೀಮತಿ ಸುನಿತಾ ಭಾಯಿ ಮಾತೃಭೂಮಿ ಸಂಘದ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಎಕ್ಕುಡೇಲು ಶಾಲಾಭಿವೃದ್ದಿ ಸಮಿತಿಯ ಮಾಜಿ ಅಧ್ಯಕ್ಷರಾದ ಸತೀಶ್ ಮಲೆಕೋಡಿ ಹಾಲಿ ಅಧ್ಯಕ್ಷರಾದ ಪ್ರವೀಣ್ ನಾವೂರು,ಉಪಸ್ಥಿತಿ ಇದ್ದರು.
ಕಾರ್ಯಕ್ರಮದಲ್ಲಿ 12 ಮಂದಿ ಮಾಜಿ ಸೈನಿಕರನ್ನು ಹಾಗೂ ಒಬ್ಬರು ಪೋಲಿಸ್ ಅಧಿಕಾರಿ ತೆರೆಯ ಮರೆಯ ಸಮಾಜ ಸೇವಕರನ್ನು ಮಾತೃಭೂಮಿ ಸಂಘಕ್ಕೆ ಸಹಕಾರದ ನೀಡಿದ ಸಮಾಜಮುಖಿ ಚಿಂತಕರನ್ನು ದಾನಿಗಳನ್ನು ಸಂಘಟನೆಯ ವತಿಯಿಂದ ಗೌರವಿಸಲಾಯಿತು ಕೃತಜ್ಞತೆ ಅರ್ಪಿಸಲಾಯಿತು.
ಸಂಘದ ನಿರ್ದೇಶಕರಾದ ಸುರೇಶ್. ಎಸ್.ನಾವೂರು ಪ್ರಸ್ತಾವಿಕದೊಂದಿಗೆ ಸ್ವಾಗತಿಸಿ,ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪ್ರಸಿಲ್ಲಾ ಡಿಸೋಜ ಶಾಲೆಯ ವರದಿ ವಾಚಿಸಿದರು
ಸಹ ಶಿಕ್ಷಕರು ಸಹಕರಿಸಿದರು.ಹಳೆ ವಿದ್ಯಾರ್ಥಿಗಳು ಪ್ರಾರ್ಥಿಸಿ ಶಿಕ್ಷಕ ಸಾಹಿತಿ ಎಂಕೆ ಕನ್ಯಾಡಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಂಘಟನೆ ಅಭಿವೃದ್ಧಿ ಯೋಜನೆಯ ಶಾಲೆಗಳಲ್ಲಿ ಒಂದಾದ ಸರಕಾರಿ ಹಿ.ಪ್ರಾಥಮಿಕ ಶಾಲೆ ನಾವೂರಿನ ವಿದ್ಯಾರ್ಥಿಗಳಿಂದ ತುಳುನಾಡಿಗೆ ಸಂಬಂಧಿಸಿದ "ತುಳುನಾಡ ಪೊರ್ಲು" ಹಾಗೂ ಸ್ಪಂದನ ಕಲಾವಿದರು ಬಂಟ್ವಾಳ ಇವರಿಂದ ಹಾಸ್ಯ ಗಾನ ಸಂಭ್ರಮ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.















