ಪಿಲಿಂಗಾಲು: ಶ್ರೀ ಗಾಯತ್ರಿ ದೇವಿ ದೇವಸ್ಥಾನಕ್ಕೆ ತಾಮ್ರದ ದೀಪ ಸಮರ್ಪಣೆ.

Coastal Bulletin
ಪಿಲಿಂಗಾಲು: ಶ್ರೀ ಗಾಯತ್ರಿ ದೇವಿ ದೇವಸ್ಥಾನಕ್ಕೆ ತಾಮ್ರದ ದೀಪ ಸಮರ್ಪಣೆ.

ಬಂಟ್ವಾಳ ತಾಲ್ಲೂಕಿನ ವಗ್ಗ ಸಮೀಪದ ಕಾಡಬೆಟ್ಟು ಗ್ರಾಮದ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಭಾನುವಾರ ಆರಂಭಗೊಂಡ ನವರಾತ್ರಿ ಉತ್ಸವ ಪ್ರಯುಕ್ತ ಸ್ಥಳೀಯ ನಿವಾಸಿ ಕಲ್ಯಾಣಿ ನಾಯ್ಕ್ ದಂಡೆ ಮತ್ತು ಮಕ್ಕಳು ರೂ. 10ಸಾವಿರ ಮೌಲ್ಯದ ತಾಮ್ರದ ದೀಪ ದೇವರಿಗೆ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.

ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್, ಪ್ರಮುಖರಾದ ಲೋಕಯ್ಯ ನಾಯ್ಕ್ ದಂಡೆ, ಶೀನ ನಾಯ್ಕ್ ದಂಡೆ, ಚಿದಾನಂದ ನಾಯ್ಕ್

ದಂಡೆ, ಜಯ ಪೂಜಾರಿ ಪಿಲಿಂಗಾಲು, ಆನಂದ ಪೂಜಾರಿ ಪಿಲಿಂಗಾಲು, ಚೇತನ್ ಪಿಲಿಂಗಾಲು, ದಿನೇಶ್ ಗಾಣಿಗ ಪಿಲಿಂಗಾಲು ಮತ್ತಿತರರು ಇದ್ದರು.

Leave a Comment